‘ಸುಶಾಂತ್ ಅದ್ಬುತ ನಟ’

7

‘ಸುಶಾಂತ್ ಅದ್ಬುತ ನಟ’

Published:
Updated:
‘ಸುಶಾಂತ್ ಅದ್ಬುತ ನಟ’

‘ಸುಶಾಂತ್ ಸಿಂಗ್ ರಜಪೂತ್ ತನ್ನ ಅಭಿನಯದಿಂದ ಸಹನಟರು ಸಹ ಉತ್ತಮವಾಗಿ ನಟಿಸುವಂತೆ ಪ್ರೇರೇಪಿಸುತ್ತಾರೆ’ ಎಂದು ‘ರಾಬ್ತಾ’ ಚಿತ್ರದ ನಟಿ ಕೃತಿ ಸನೊನ್ ಹೇಳಿದ್ದಾರೆ.

ಈ ಚಿತ್ರದಲ್ಲಿ ಸುಶಾಂತ್ ನಾಯಕನ ಪಾತ್ರ ನಿರ್ವಹಿಸಿದ್ದಾರೆ.

ಪಾತ್ರದ ಆಳಕ್ಕೆ ಇಳಿದು ನಟಿಸುವ ಅವರು, ಪಾತ್ರಕ್ಕಾಗಿ ಸಾಕಷ್ಟು ತಯಾರಾಗಿ ಬಂದಿರುತ್ತಾರೆ. ಅವರ ನಟನೆ ಸಹನಟರು ಬೆರಗುಗಣ್ಣಿನಿಂದ ನೋಡುವಂತೆ ಮಾಡಿಬಿಡುತ್ತದೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ ಬಹುಭಾಷಾ ನಟಿ ಕೃತಿ ಸನೊನ್.

‘ರಾಬ್ತಾ’ ಚಿತ್ರದ ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ದಿನೇ ದಿನೇ ಇವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಗುತ್ತಿದೆ ಎಂಬ ಗಾಳಿ ಸುದ್ದಿಗಳಿದ್ದವು. ಇದೀಗ ಕೃತಿ  ಸನೊನ್ ತನ್ನ ಸಹನಟನ ಬಗ್ಗೆ ಹಾಡಿ ಹೊಗಳಿರುವುದು ಗಾಳಿಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿದೆ.

ಇಬ್ಬರ ನಡುವಿನ ಆತ್ಮೀಯತೆಯ ಬಗ್ಗೆ ಎದ್ದಿರುವ ಊಹಾಪೋಹಗಳನ್ನು ತಳ್ಳಿಹಾಕಿರುವ ಕೃತಿ, ‘ಆ ರೀತಿಯ ಸುದ್ದಿಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು’ ಎಂದು ಹೇಳಿದ್ದಾರೆ.

ತೆಲುಗು, ತಮಿಳು ಚಿತ್ರರಂಗದಲ್ಲೂ ಬೇಡಿಕೆಯುಳ್ಳ ಕೃತಿ ‘ರಾಬ್ತಾ’ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಜೊತೆಗೆ ಹಲವು ಆ್ಯಕ್ಷನ್ ದೃಶ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಇವರು ಪ್ರತ್ಯೇಕ ತರಬೇತಿ ಪಡೆದುಕೊಂಡಿದ್ದರಂತೆ.

‘ಆ್ಯಕ್ಷನ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ನಾನು ಸಾಕಷ್ಟು ಉತ್ಸುಕಳಾಗಿದ್ದೆ, ಕಸರತ್ತು ಮಾಡುವುದು ಸಮರ ಕಲೆಗಳನ್ನು ಕಲಿಯುವುದು ದೈಹಿಕ ಮತ್ತು ಮಾನಸಿಕ ಗಟ್ಟಿತನ ಒದಗಿಸುತ್ತದೆ. ಬಹಳ ಕಷ್ಟಕರವಾದ ಸಮರ ದೃಶ್ಯಗಳಲ್ಲಿ ಪಾಲ್ಗೊಂಡಿದ್ದೆ’ ಎಂದು ತಮ್ಮ ಸಾಹಸ ದೃಶ್ಯಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ರಾಬ್ತಾ’ ಚಿತ್ರವನ್ನು ದಿನೇಶ್‌ ವಿಜಯನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

2015 ರಲ್ಲಿ ಬಿಡುಗಡೆ ಆಗಿದ್ದ ‘ದಿಲ್‌ವಾಲೆ’ ಕೃತಿ ಅವರು ಅಭಿನಯಿಸಿದ್ದ ಕೊನೆಯ ಚಿತ್ರ.  ಬಾಲಿವುಡ್‌ನಿಂದ ಕಳೆದ ವರ್ಷ ದೂರ ಉಳಿದಿದ್ದಕ್ಕೆ ಯಾವುದೇ ಬೇಸರ ಇಲ್ಲ ಎಂದಿರುವ ಅವರು ‘ನಾನು ಸದಾ ಕೆಲಸ ಮಾಡುತ್ತಲೇ ಇರುತ್ತೇನೆ,  ಇದೀಗ ‘ರಾಬ್ತಾ’ ಮತ್ತು ‘ಬರೇಲಿ ಕಿ ಬರ್ಫಿ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ’ ಎನ್ನುವ ಮೂಲಕ ತಾನು ಬೇಡಿಕೆಯ ನಟಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry