ಬಸ್‌ ಪಾಸ್‌ ಯೋಜನೆ: ₹ 85 ಶುಲ್ಕ ನಿಗದಿ

7

ಬಸ್‌ ಪಾಸ್‌ ಯೋಜನೆ: ₹ 85 ಶುಲ್ಕ ನಿಗದಿ

Published:
Updated:
ಬಸ್‌ ಪಾಸ್‌ ಯೋಜನೆ: ₹ 85 ಶುಲ್ಕ ನಿಗದಿ

ಬೆಂಗಳೂರು: ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಯೋಜನೆಯನ್ನು ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಜಾರಿಗೊಳಿಸಿದ್ದು, ಒಂದು ಶೈಕ್ಷಣಿಕ ಅವಧಿಗೆ ₹85 ಶುಲ್ಕ ನಿಗದಿ ಮಾಡಿದೆ.

ಪರಿಹಾರ ನಿಧಿಗಾಗಿ ₹5 ಹಾಗೂ ಸಂಸ್ಕರಣಾ ಶುಲ್ಕವಾಗಿ ₹80 ಪಾವತಿಸಬೇಕು. ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯೊಂದಿಗೆ ನಿಗದಿತ ಅರ್ಜಿ ಭರ್ತಿ ಮಾಡಿ ಶೈಕ್ಷಣಿಕ ಸಂಸ್ಥೆಗಳ ಮೂಲಕ ನಿಗಮಕ್ಕೆ ಸಲ್ಲಿಸಬೇಕು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry