ಶ್ರೀನಿವಾಸ ಕೂಚಿಬೊಟ್ಲಾ ಹತ್ಯೆ ಆರೋಪಿ ವಿರುದ್ಧ ದ್ವೇಷಾಪರಾಧದ ದೋಷಾರೋಪ

7

ಶ್ರೀನಿವಾಸ ಕೂಚಿಬೊಟ್ಲಾ ಹತ್ಯೆ ಆರೋಪಿ ವಿರುದ್ಧ ದ್ವೇಷಾಪರಾಧದ ದೋಷಾರೋಪ

Published:
Updated:
ಶ್ರೀನಿವಾಸ ಕೂಚಿಬೊಟ್ಲಾ ಹತ್ಯೆ ಆರೋಪಿ ವಿರುದ್ಧ ದ್ವೇಷಾಪರಾಧದ ದೋಷಾರೋಪ

ವಾಷಿಂಗ್ಟನ್: ಹೈದರಾಬಾದ್‌ನ ಎಂಜಿನಿಯರ್ ಶ್ರೀನಿವಾಸ ಕೂಚಿಬೊಟ್ಲಾ ಅವರ ಹತ್ಯೆ ಪ್ರಕರಣದ ಆರೋಪಿ ಆಡಮ್ ಪುರಿಟನ್ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ದ್ವೇಷಾಪರಾಧದ ದೋಷಾರೋಪ ಹೊರಿಸಲಾಗಿದೆ.

ಆರೋಪಿಯು ಜನಾಂಗ, ವರ್ಣ, ಧರ್ಮ ಮತ್ತು ರಾಷ್ಟ್ರೀಯತೆಯ ಆಧಾರದಲ್ಲಿ ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕೂಚಿಬೊಟ್ಲಾ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಫೆಬ್ರವುರಿ 22ರಂದು ಅಮೆರಿಕದ ಕನ್ಸಾಸ್ ನಗರದ ಆಸ್ಟಿನ್ ಬಾರ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದ ಆರೋಪ ಈತನ ಮೇಲಿದೆ. ಗುಂಡಿನ ದಾಳಿಯಲ್ಲಿ ಶ್ರೀನಿವಾಸ ಅವರ ಸಹೋದ್ಯೋಗಿ ವರಂಗಲ್‌ನ ಅಕೋಲ್ ಮೇಡಸಾನಿ ಹಾಗೂ ಅಮೆರಿಕ ಪ್ರಜೆ ಇಯಾನ್ ಗ್ರಿಲ್ಲಟ್ ಅವರೂ ಗಾಯಗೊಂಡಿದ್ದರು. ‘ನನ್ನ ದೇಶ ಬಿಟ್ಟು ಹೊರನಡೆಯಿರಿ’ ಎಂದು ಚೀರಾಡುತ್ತಾ ಆತ ಗುಂಡು ಹಾರಿಸಿದ್ದ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.

ಆರೋಪ ಸಾಬೀತಾದಲ್ಲಿ ಆಡಮ್ ಪುರಿಟನ್ ಗರಿಷ್ಠ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry