ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯರ ‘ಉನ್ನತಿ’ಗಾಗಿ ಹಾಸ್ಟೆಲ್‌ ಸೌಲಭ್ಯ

Last Updated 11 ಜೂನ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ಅನಕ್ಷರತೆ ಮತ್ತು ಬಡತನದ ಕಾರಣದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದವರಿಗೆ ಉದ್ಯೋಗ ಆಧಾರಿತ ಶಿಕ್ಷಣ ನೀಡುತ್ತಿರುವ ‘ಉನ್ನತಿ ತರಬೇತಿ ಸಂಸ್ಥೆ’ ನಗರದ ವಿದ್ಯಾರ್ಥಿನಿಯರಿಗಾಗಿ ನೂತನ ಹಾಸ್ಟೆಲ್‌ ಪ್ರಾರಂಭಿಸಿದೆ.

ಬೈಯಪ್ಪನಹಳ್ಳಿಯ ಸದಾನಂದ ನಗರದಲ್ಲಿನ ‘ಉನ್ನತಿ’ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿನಿ ನಿಲಯವನ್ನು ಭಾನುವಾರ ಉದ್ಘಾಟಿಸಲಾಯಿತು.

ಉನ್ನತಿ ಕೇಂದ್ರದ ಟ್ರಸ್ಟಿ ಎನ್‌.ಎಚ್. ಸುಬ್ರಮಣಿಯನ್‌, ‘ನಮ್ಮಲ್ಲಿ ಈಗ ಒಟ್ಟು 150 ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. ಅದರಲ್ಲಿ ನಗರದ ಹೊರಭಾಗದಿಂದ ಬರುವ ವಿದ್ಯಾರ್ಥಿನಿಯರಿಗಾಗಿ ಈ ಹಾಸ್ಟೆಲ್‌ ನಿರ್ಮಿಸಿದ್ದೇವೆ. ಒಂದು ವರ್ಷದ ಹಿಂದೆ ಬಾಲಕರ ಹಾಸ್ಟೆಲ್‌ ಪ್ರಾರಂಭಿಸಿದ್ದೆವು’ ಎಂದು ಹೇಳಿದರು.

‘₹1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯಾರ್ಥಿನಿ ನಿಲಯದಲ್ಲಿ ಒಟ್ಟು 70 ಹಾಸಿಗೆಗಳಿವೆ. ಕಟ್ಟಡಕ್ಕೆ ಸಂಪೂರ್ಣ ಸೌರವಿದ್ಯುತ್‌ ಅಳವಡಿಸಲಾಗಿದೆ. ವಸತಿ ಜತೆಗೆ ಬೆಳಿಗ್ಗೆ ಮತ್ತು ಸಂಜೆ ಊಟದ ವ್ಯವಸ್ಥೆ ಇದೆ.

ಅಲ್ಲದೆ, ಸ್ಯಾನಿಟರಿ ತ್ಯಾಜ್ಯ ನಿರ್ವಹಣೆಗೆ ವಿಶೇಷ ಯಂತ್ರ ಅಳವಡಿಸಲಾಗಿದೆ. ಇದರಿಂದ ಒಳಚರಂಡಿ ಕಟ್ಟಿಕೊಳ್ಳುವ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದರು.

ಉನ್ನತಿ ಕೇಂದ್ರದ ಕುರಿತು: ಬಡತನದ ಕಾರಣದಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೇ ಇರುವ ಸುಮಾರು 4,000ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿ, ನೌಕರಿ ಕೊಡಿಸಿದೆ.

2003ರಲ್ಲಿ ಈ ಸಂಸ್ಥೆ ಆರಂಭವಾದ ಈ ಸಂಸ್ಥೆ, ಪರಿಣಿತ ಶಿಕ್ಷಕರ ತಂಡ, ಸುಸಜ್ಜಿತ ತರಗತಿಗಳು, ಕಂಪ್ಯೂಟರ್ ವ್ಯವಸ್ಥೆ, ದೃಶ್ಯ ಸಂಯೋಜನೆ ಮೂಲಕ ಬೋಧನಾ ವ್ಯವಸ್ಥೆಯನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇನ್ಫೊಸಿಸ್ ಸಂಸ್ಥೆ ವಿಶಾಲವಾದ ಸಭಾಂಗಣ ನಿರ್ಮಿಸಿಕೊಟ್ಟಿದೆ.
****
ಏನೇನು ತರಬೇತಿ?
ಇಲ್ಲಿ ವಿದ್ಯಾರ್ಥಿಗಳಿಗೆ 70 ದಿನಗಳ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಡೇಟಾ ಎಂಟ್ರಿ, ರೀಟೇಲ್ ಸೇಲ್ಸ್ ಅಂಡ್ ಮಾರ್ಕೆಟಿಂಗ್,  ಇನ್‌ಸ್ಟೋರ್, ಜೀವನ ಕೌಶಲ, ಕಂಪ್ಯೂಟರ್, ಬಿಪಿಒ, ಗೆಸ್ಟ್ ಕೇರ್, ಡ್ರೈವಿಂಗ್, ಬ್ಯೂಟಿಷಿಯನ್, ಇಂಡಸ್ಟ್ರಿಯಲ್ ಪೇಂಟಿಂಗ್, ಸೆಕ್ಯೂರಿಟಿ ಸರ್ವೀಸಸ್, ಆಂಗ್ಲ ಭಾಷೆಯ ಸಂವಹನ ಕುರಿತು ಹೇಳಿಕೊಡಲಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT