ಚರ್ಮದ ಕಾಂತಿಗೆ ಹರಳೆಣ್ಣೆ

7

ಚರ್ಮದ ಕಾಂತಿಗೆ ಹರಳೆಣ್ಣೆ

Published:
Updated:
ಚರ್ಮದ ಕಾಂತಿಗೆ ಹರಳೆಣ್ಣೆ

ಚರ್ಮ ಒರಟಾಗಿ ಕಳಾಹೀನವಾಗಿದ್ದರೆ, ಕೂದಲು ಹೊಳಪು ಕಳೆದುಕೊಂಡಿದ್ದರೆ, ಪಾದ ಬಿರುಕು ಬಿಟ್ಟಿದ್ದರೆ ಹರಳೆಣ್ಣೆ ಹಚ್ಚುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

* ಹರಳೆಣ್ಣೆಯನ್ನು ವಾರಕ್ಕೊಮ್ಮೆ ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ತೊಳೆದುಕೊಳ್ಳುವುದರಿಂದ ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿಯಂತ್ರಿಸಬಹುದು.

* ಉಗುರು ಬೆಚ್ಚಗೆ ಕಾಯಿಸಿದ  ಹರಳೆಣ್ಣೆಯನ್ನು ವಾರಕ್ಕೊಮ್ಮೆ ಮೈಗೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ಮೃದುವಾಗುತ್ತದೆ.

* ಮಲಗುವ ಮೊದಲು ಕಣ್ಣಿನ ರೆಪ್ಪೆ ಮತ್ತು ಹುಬ್ಬಿಗೆ ಹರಳೆಣ್ಣೆ ಹಚ್ಚುವುದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.

* ಬಿಸಿ ಮಾಡಿದ ಹರಳೆಣ್ಣೆ ಮತ್ತು ಅರಿಶಿಣದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಮುಖ ತೊಳೆದುಕೊಳ್ಳುವುದರಿಂದ ಮೊಡವೆ ಕಲೆ ಗುಣವಾಗುತ್ತದೆ.

* ಗರ್ಭಿಣಿಯರು ಹೊಟ್ಟೆಗೆ ಹರಳೆಣ್ಣೆ ಹಚ್ಚಿಕೊಳ್ಳುವುದರಿಂದ ಸ್ಟ್ರೆಚ್‌ ಮಾರ್ಕ್‌ ನಿಯಂತ್ರಿಸಬಹುದು.

* ತಲೆ ಸ್ನಾನಕ್ಕೂ ಒಂದು ಗಂಟೆಯ ಮುಂಚೆ ತಲೆಗೆ ಹರಳೆಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟಿನಿಂದ ಮುಕ್ತಿ ಪಡೆಯಬಹುದು.

* ಬಿಸಿಲಿಗೆ ಮುಖ ಕಳೆಗುಂದಿ, ಬಣ್ಣ ಕಳೆದುಕೊಂಡಿದ್ದರೆ (ಸನ್‌ ಟ್ಯಾನ್‌) ಈ ಎಣ್ಣೆ ಹಚ್ಚುವುದರಿಂದ ಚರ್ಮ ಸಹಜ ಬಣ್ಣಕ್ಕೆ ಬರುತ್ತದೆ.

* ಹರಳೆಣ್ಣೆ ಜೊತೆಗೆ ಜೊಜೊಬಾ ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ.

* ಹರಳೆಣ್ಣೆ ಜೊತೆಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮುಖಕ್ಕೆ ಹಚ್ಚಿ, ಹತ್ತು ನಿಮಿಷದ ನಂತರ ತೊಳೆಯುವುದರಿಂದ ಚರ್ಮ ತಾಜಾವಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry