ವಾಲಿ ಲೀಗ್‌:  ಬಿಎಸ್‌ಎನ್‌ಎಲ್‌ ತಂಡಕ್ಕೆ ಪ್ರಶಸ್ತಿ

7

ವಾಲಿ ಲೀಗ್‌:  ಬಿಎಸ್‌ಎನ್‌ಎಲ್‌ ತಂಡಕ್ಕೆ ಪ್ರಶಸ್ತಿ

Published:
Updated:
ವಾಲಿ ಲೀಗ್‌:  ಬಿಎಸ್‌ಎನ್‌ಎಲ್‌ ತಂಡಕ್ಕೆ ಪ್ರಶಸ್ತಿ

ಬೆಂಗಳೂರು: ಬಿಎಸ್‌ಎನ್‌ಎಲ್ ಮತ್ತು ಪೋಸ್ಟಲ್ ತಂಡಗಳು ಬಂಗಾರಪೇಟೆ ಯಲ್ಲಿ ನಡೆದ ಕರ್ನಾಟಕ ವಾಲಿ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.

ಪುರುಷರ ವಿಭಾಗದ ಅಂತಿಮ ಲೀಗ್ ಪಂದ್ಯದಲ್ಲಿ ಬಿಎಸ್‌ಎನ್‌ಎಲ್‌ ತಂಡ 25–22, 16–25, 25–19,  25–19ರಲ್ಲಿ ಎಸ್‌ಡಬ್ಲ್ಯುಆರ್‌ ತಂಡ ವನ್ನು ಮಣಿಸಿತು. ಈ ಪಂದ್ಯದಲ್ಲಿ ರವಿಕುಮಾರ್‌, ಪವನ್ ರಮೇಶ್‌, ಅಜಿತ್‌ ಮತ್ತು ನಕುಲ್‌ದೇವ್ ಉತ್ತಮ ಸಾಮರ್ಥ್ಯ ತೋರಿದರು.

ಮಹಿಳೆಯರ ವಿಭಾಗದ ಪಂದ್ಯದಲ್ಲಿ ಪೋಸ್ಟಲ್ 25–15, 25–05, 25–23ರಲ್ಲಿ ಮೈಸೂರು ಸ್ಪೋರ್ಟ್ಸ್‌ ಹಾಸ್ಟೆಲ್ ತಂಡದ ಎದುರು ಜಯಗಳಿಸಿತು. ಈ ತಂಡದ ಬಬಿತಾ, ಶ್ವೇತಾ, ಅನುಷಾ ಉತ್ತಮವಾಗಿ ಆಡಿದರು.

ಮಹಿಳೆಯರ ವಿಭಾಗಗಳಲ್ಲಿ ಎಸ್‌ಡಿಎಮ್‌ ಸ್ಪೋರ್ಟ್ಸ್‌ ಕ್ಲಬ್‌, ಬೆಂಗಳೂರು ಸಿಟಿ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ.

ಪುರುಷರ ವಿಭಾಗದಲ್ಲಿ ಎಸ್‌ಡಬ್ಲ್ಯು ಆರ್‌ ಹಾಗೂ ಪೋಸ್ಟಲ್ ತಂಡಗಳು ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry