ಎಚ್‌ಡಿಕೆ ಜಾಮೀನು ಅರ್ಜಿ ವಜಾ

7

ಎಚ್‌ಡಿಕೆ ಜಾಮೀನು ಅರ್ಜಿ ವಜಾ

Published:
Updated:
ಎಚ್‌ಡಿಕೆ ಜಾಮೀನು ಅರ್ಜಿ ವಜಾ

ಬೆಂಗಳೂರು: ಜಂತಕಲ್‌ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಆರೋಪಿಯಾಗಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ನ್ಯಾಯಾಧೀಶ ಗೋಪಾಲ್‌ ಅವರು  ಈ ಆದೇಶ ಪ್ರಕಟಿಸಿ, ಅರ್ಜಿದಾರರ ಮಧ್ಯಂತರ ಜಾಮೀನು ತೆರವುಗೊಳಿಸಲಾಗಿದೆ ಎಂದರು.

‘ಬಂಧನದ ಭೀತಿ ಇದೆ ಎಂಬ ಅರ್ಜಿದಾರರ ಊಹೆಯನ್ನು ಒಪ್ಪಲಾಗದು. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಗೊಳಿಸುವ ಸಾಧ್ಯತೆ ಇದೆ’ ಎಂದು ಆದೇಶದಲ್ಲಿ  ಅಭಿಪ್ರಾಯಪಡಲಾಗಿದೆ.

‘ಜಂತಕಲ್‌ ಎಂಟರ್‌ ಪ್ರೈಸಸ್‌ ಗಣಿ ಗುತ್ತಿಗೆ ನವೀಕರಣ ಹಾಗೂ ಅದಿರು ಸಾಗಣೆಗೆ ಅನುಮತಿ ನೀಡಿದ ಸಮಯದಲ್ಲಿ  ಕುಮಾರಸ್ವಾಮಿ  ಮುಖ್ಯಮಂತ್ರಿಯಾಗಿದ್ದರು. ಅವರು  ಎರಡೇ ಗಂಟೆ ಪರವಾನಗಿ ನೀಡುವಂತೆ ಸೂಚಿಸಿದ್ದರು’  ಎಂಬುದು ಅವರ  ಮೇಲಿರುವ ಆರೋಪ.

ಇದೇ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿ ಗಂಗಾರಾಂ ಬಡೇರಿಯಾ ಅವರನ್ನು   ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದ ನಂತರ ಎಚ್‌.ಡಿ. ಕುಮಾರಸ್ವಾಮಿ ಅವರು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ಮೇಲ್ಮನವಿ: ವಿಶೇಷ ನ್ಯಾಯಾಲಯದ ಆದೇಶವನ್ನು ಕುಮಾರಸ್ವಾಮಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry