ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಟಿ ಬಾಕ್ಸ್‌ ನಾರ್ವೆ ಚೆಸ್‌ ಟೂರ್ನಿ: ವಿಶ್ವನಾಥನ್‌ ಆನಂದ್‌ಗೆ ಗೆಲುವು

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಸ್ಟಾವೆಂಜರ್‌, ನಾರ್ವೆ : ಚುರುಕಾಗಿ ಕಾಯಿಗಳನ್ನು ಮುನ್ನಡೆ ಸಿದ ಭಾರ ತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಅಲ್ಟಿ ಬಾಕ್ಸ್‌ ನಾರ್ವೆ ಚೆಸ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದ್ದಾರೆ.

ಮಂಗಳವಾರ ನಡೆದ ಆರನೇ ಸುತ್ತಿನ ಹಣಾಹಣಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌ ಅವರು  ಅಮೆರಿಕಾದ ಫ್ಯಾಬಿಯಾನೊ ಕರುವಾನ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಖಾತೆ ತೆರೆದರು.

ಇದಕ್ಕೂ ಮುನ್ನ ನಡೆದಿದ್ದ ಐದು ಸುತ್ತುಗಳ ಹೋರಾಟದಲ್ಲಿ ಭಾರತದ ಆಟ ಗಾರ ಎರಡರಲ್ಲಿ ಸೋತಿದ್ದು, ಮೂರು ಪಂದ್ಯಗಳಲ್ಲಿ ಡ್ರಾ ಮಾಡಿ ಕೊಂಡಿದ್ದರು.

ಈ ಗೆಲುವಿನೊಂದಿಗೆ ಆನಂದ್‌ ಅವರು ಒಟ್ಟು ಪಾಯಿಂಟ್ಸ್‌ ಅನ್ನು 2.5ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಮೂರು ಸುತ್ತುಗಳ ಆಟ ಬಾಕಿ ಇದ್ದು ಆನಂದ್‌ ಅವರ ಪ್ರಶಸ್ತಿಯ ಆಸೆ ಜೀವಂತವಾಗಿರ ಬೇಕಾದರೆ ಅವರು ಎಲ್ಲಾ ಹಣಾಹಣಿ ಗಳಲ್ಲೂ ಗೆಲ್ಲಲೇಬೇಕಿದೆ. ಜಂಟಿ ಅಗ್ರಸ್ಥಾನದಲ್ಲಿ

ಅರೋನಿಯನ್‌: ಅರ್ಮೇನಿಯಾದ ಆಟಗಾರ ಲೆವೊನ್‌ ಅರೋನಿಯನ್‌ ಅವರು   ಪಾಯಿಂಟ್ಸ್‌ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಹೊಂದಿದ್ದಾರೆ.
ಆರನೇ ಸುತ್ತಿನ ಹಣಾಹಣಿಯಲ್ಲಿ ಅರೋನಿಯನ್‌ ಅವರು ರಷ್ಯಾದ ಆಟಗಾರ ವ್ಲಾದಿಮಿರ್‌ ಕ್ರಾಮ್ನಿಕ್‌ ವಿರುದ್ಧ ಗೆದ್ದರು. ಈ ಮೂಲಕ  ಪೂರ್ಣ ಪಾಯಿಂಟ್‌ ಸಂಗ್ರಹಿಸಿದ ಅವರು ಒಟ್ಟು ಅಂಕವನ್ನು 4ಕ್ಕೆ ಹೆಚ್ಚಿಸಿಕೊಂಡರು.

ಅಮೆರಿಕಾದ ಹಿಕಾರು ನಕಮುರಾ ಅವರ ಖಾತೆಯಲ್ಲೂ ಇಷ್ಟೇ ಪಾಯಿಂಟ್ಸ್‌ ಇದೆ. ಆರನೇ ಸುತ್ತಿನ ಪಂದ್ಯದಲ್ಲಿ ನಕಮುರಾ ಅವರು ರಷ್ಯಾದ ಸರ್ಜಿ ಕರ್ಜಾಕಿನ್‌ ವಿರುದ್ಧ ಡ್ರಾ ಮಾಡಿಕೊಂಡರು. ಇತರ ಪಂದ್ಯಗಳಲ್ಲಿ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಫ್ರಾನ್ಸ್‌ನ ಮ್ಯಾಕ್ಸಿಮ್‌ ವಚೈರ್‌ ಲಾಗ್ರೇವ್‌ ಎದುರೂ,  ನೆದರ್ಲೆಂಡ್ಸ್‌ನ ಅನಿಶ್‌್ ಗಿರಿ ಅವರು  ಅಮೆರಿಕಾದ ವೆಸ್ಲಿ ಸೊ ಮೇಲೂ ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT