ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಖರೀದಿ ಅವಧಿ ವಿಸ್ತರಣೆಗೆ ಆಗ್ರಹ

Last Updated 14 ಜೂನ್ 2017, 7:08 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಾಲ್ಕು ತೊಗರಿ ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿ ಅವಧಿಯನ್ನು ಜೂನ್‌ 20ರವರೆಗೆ ವಿಸ್ತರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಸದಸ್ಯರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

‘ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದರೂ ಕೇಂದ್ರದ ಸಿಬ್ಬಂದಿ ರೈತರಿಂದ ತೊಗರಿ ಖರೀದಿ ಸಲು ವಿಳಂಬ ತೋರುತ್ತಿದ್ದಾರೆ. ಹೆಸರನ್ನು ನೋಂದಾಯಿಸದ ರೈತರ ಮತ್ತು ದಲ್ಲಾಳಿಗಳ ತೊಗರಿ ಖರೀದಿಸ ಲಾಗುತ್ತಿದೆ. ಇದರಿಂದ ನಿಜವಾದ ರೈತರಿಗೆ ಅನ್ಯಾಯವಾಗಿದೆ’ ಎಂದು ಪ್ರತಿ ಭಟನಾಕಾರರು ಆರೋಪಿಸಿದರು.

‘ನಾಲ್ಕು ಖರೀದಿ ಕೇಂದ್ರದಲ್ಲಿ 4 ಸಾವಿರ ಕ್ವಿಂಟಲ್‌ ತೊಗರಿ ಖರೀದಿ ಯಾಗದೇ ಯಥಾಸ್ಥಿತಿ ಉಳಿದಿದೆ. ಮಳೆಯಾಗುತ್ತಿದ್ದು, ಒಕ್ಕಲುತನದ ಸಲುವಾಗಿ ರೈತರು ಹೊಲಕ್ಕೆ ಹೋಗ ಬೇಕಿದೆ. ಇತ್ತ ತೊಗರಿ ಖರೀದಿಯು ಆಗದೇ ರೈತರು ಕಂಗಾಲು ಆಗಿದ್ದಾರೆ.  ತೊಗರಿ ಖರೀದಿಯಾದರೆ ಹಣ ಸಿಗುತ್ತದೆ. ಹಣವಿಲ್ಲದೇ ನಾವು ಒಕ್ಕಲುತನ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು.

‘ರೈತರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಖರೀದಿ ಕೇಂದ್ರದ ಅವಧಿ ವಿಸ್ತರಿಸ ಬೇಕು. ನಿರ್ಲಕ್ಷ್ಯ ತೋರಿದ್ದಲ್ಲಿ, ಬೆಂಗಳೂ ರಿನಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ಮಾಲಗತ್ತಿ, ಮುಖಂಡರಾದ ಭೀಮರಾಯ ಒಕ್ಕಲಿಗ ಮಾಲಗತ್ತಿ, ಹುಸೇನ ಬಾಷಾ ನಾಗರಾಳ, ಸಂಗಣ್ಣ ಸಾಹುಕಾರ್, ಸಂತೋಷ, ನಿಂಗಣ್ಣ ಸಾಹುಕಾರ್, ಮಲ್ಲಣ್ಣ, ಬಂದಣ್ಣ, ಈರಣ್ಣ, ನಾಗಪ್ಪ, ಶಿವರಾಯ ಮೇಟಿ, ಚಂದಪ್ಪ ಹುಲಗಪ್ಪ, ಶರಣಪ್ಪ, ಬಸಣ್ಣ ಮೇಟಿ, ಸಂಗಣ್ಣ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT