ಸೋಲಿಗೆ ಕಂಗೆಡದ ಕೈರಾ

7

ಸೋಲಿಗೆ ಕಂಗೆಡದ ಕೈರಾ

Published:
Updated:
ಸೋಲಿಗೆ ಕಂಗೆಡದ ಕೈರಾ

ಹೊಸ ನಟಿಯರು ಸಿನಿಮಾ ಸೋಲು  ಕಂಡಾಗ ಗಲಿಬಿಲಿಗೊಳಿಸುವುದು ಸಾಮಾನ್ಯ. ಆದರೆ ನಟಿ ಕೈರಾ ಅಡ್ವಾಣಿಗೆ ಸೋಲು, ಗೆಲುವು ಹಲವು ಪಾಠಗಳನ್ನು ಕಲಿಸಿದೆಯಂತೆ.

ನಟ ಸಲ್ಮಾನ್‌ ಖಾನ್‌ ಅಣತಿಯಂತೆ ಹೆಸರು ಬದಲಿಸಿಕೊಂಡು ಬಿ–ಟೌನ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು ಕೈರಾ ಅಡ್ವಾಣಿ. ಇವರ ನಟನೆಯ  ‘ಫಗ್ಲಿ’ ಮತ್ತು ‘ಎಂ.ಎಸ್ ದೋನಿ: ದಿ ಅನ್‌ಟೋಲ್ಡ್‌  ಸ್ಟೋರಿ’ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಅವರ ಮೂರನೇ ಸಿನಿಮಾ ‘ಮೆಷಿನ್‌’ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವುದರಲ್ಲಿ ವಿಫಲವಾಗಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಸಿನಿಮಾ ಕ್ಷೇತ್ರಕ್ಕೆ ಅಡಿಯಿಟ್ಟ ಹೊಸತರಲ್ಲಿಯೇ ಅಬ್ಬಾಸ್‌– ಮಸ್ತಾನ್‌ ಅವರಂತಹ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ನಟನೆಗೂ ಒಳ್ಳೆಯ ಮಾನ್ಯತೆಯಿತ್ತು. ಸಿನಿಮಾ ಸೋಲು ಕಂಡಿರಬಹುದು ಆದರೆ ಅದು ನನಗೆ ಒಳ್ಳೆಯ ಅನುಭವ ನೀಡಿದೆ’ ಎಂದಿದ್ದಾರೆ.

ಸದ್ಯ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಕೈರಾ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry