ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ತಂದೆ ಮೃತಪಟ್ಟ ಬಳಿಕ ಅಮ್ಮ ಕೂಲಿ ಮಾಡಿ ನಮ್ಮನ್ನೆಲ್ಲ ಓದಿಸಬೇಕಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದರೂ ಮುಂದಿನ ಓದಿಗೆ ಆರ್ಥಿಕ ಅಡಚಣೆಯಾಯಿತು. ಈ ಹಂತದಲ್ಲೇ ಪ್ರಜಾವಾಣಿ ನೆರವಿಗೆ ಬಂತು. ಹಾಸ್ಟೆಲ್‌ ಶುಲ್ಕ ಕಟ್ಟಿದೆ. ಪ್ರಸ್ತುತ ಧಾರವಾಡದಲ್ಲಿ ಪಿಯು ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.
ಎಂ.ರಾಜಪ್ಪ,ಹಲವಾಗಲು, ಹರಪನಹಳ್ಳಿ

***

ನಮ್ಮದು ರೈತ ಕುಟುಂಬ. ಕಳೆದ ವರ್ಷ ಮಳೆಯಾಗದೆ ಬೆಳೆ ಬಂದಿರಲಿಲ್ಲ. ಕುಟುಂಬ ಆರ್ಥಿಕವಾಗಿ ಕಷ್ಟದಲ್ಲಿದ್ದಾಗ ಪ್ರಜಾವಾಣಿ ದೊರೆಯಿತು. ಹಣದಿಂದ ಕಾಲೇಜಿನ ಹಾಸ್ಟೆಲ್‌ ಶುಲ್ಕ ಕಟ್ಟಿದೆ. ಪ್ರಥಮ ಪಿಯುನಲ್ಲಿ ಶೇ 94 ಅಂಕ ಬಂದಿದೆ. ಪ್ರಸ್ತುತ ಚಿತ್ರದುರ್ಗ ತಾಲ್ಲೂಕು ಸಿರಿಗೆರೆಯ ಎಂ.ಬಿ.ಆರ್‌ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯು ಓದುತ್ತಿದ್ದೇನೆ.

ಅರ್ಪಿತಾ, ಮದ್ದಿಹಳ್ಳಿ,ಹರಪನಹಳ್ಳಿ ತಾ.


***
ಶುಲ್ಕ ಕಟ್ಟಿದೆ

‘ಪ್ರಜಾವಾಣಿ’ ಸಕಾಲಕ್ಕೆ ಸ್ಕಾಲರ್‌ಶಿಪ್‌ ನೀಡಿದ್ದರಿಂದ ಪಿಯು ಶಿಕ್ಷಣಕ್ಕೆ ನೆರವಾಯಿತು. ವಿದ್ಯಾರ್ಥಿ ವೇತನದಿಂದ ಕಾಲೇಜು ಶುಲ್ಕ ಕಟ್ಟಿದೆ.

ಪುಸ್ತಕಗಳನ್ನು ಖರೀದಿಸಿದೆ. ಪ್ರಸ್ತುತ ಹೊಸದುರ್ಗದ ನಿಜಲಿಂಗಪ್ಪ ಕಾಲೇಜಿನಲ್ಲಿ ಪಿಯು (ವಿಜ್ಞಾನ) ವ್ಯಾಸಂಗ ಮಾಡುತ್ತಿದ್ದೇನೆ.
ಎಂ.ಆರ್‌.ತೇಜಸ್ವಿನಿ,ಮಧುರೆ, ಹೊಸದುರ್ಗ ತಾ.


***
ಧನ್ಯವಾದ...

ಪ್ರಥಮ ಪಿಯು ವಿಜ್ಞಾನ ವಿಷಯದಲ್ಲಿ ಶೇ 99 ಅಂಕ ಸಿಕ್ಕಿದೆ. ನನ್ನ ಈ ಸಾಧನೆಗೆ ‘ಪ್ರಜಾವಾಣಿ’ ನೀಡಿದ ಸ್ಕಾಲರ್‌ಶಿಪ್‌ ಕೂಡ ಕಾರಣ. ಆರ್ಥಿಕ ಸಂಕಷ್ಟ ಎದುರಾದ ಸಮಯಕ್ಕೆ ಹಣ ಸಿಕ್ಕಿತು. ಇದರಿಂದ ಪುಸ್ತಕಗಳನ್ನು ಖರೀದಿಸಿದೆ.  ಪ್ರಸ್ತುತ ಉಡುಪಿ ಜಿಲ್ಲೆ ಹೆಬ್ರಿಯ ಅಮೃತ ಭಾರತಿ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದೇನೆ. ನೆರವಿಗೆ ಧನ್ಯವಾದ.

ಧನುಷ್‌ ಪಿ. ಗರ್ತಿಕೆರೆ,ಹೊಸನಗರ ತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT