ಸಂಸದ ರಾಜು ಶೆಟ್ಟಿ ಬಿಟ್ಟು ತೆರಳಿದ ವಿಮಾನ

7

ಸಂಸದ ರಾಜು ಶೆಟ್ಟಿ ಬಿಟ್ಟು ತೆರಳಿದ ವಿಮಾನ

Published:
Updated:
ಸಂಸದ ರಾಜು ಶೆಟ್ಟಿ ಬಿಟ್ಟು ತೆರಳಿದ ವಿಮಾನ

ಮುಂಬೈ: ‘ಜೆಟ್ ಏರ್‌ವೇಸ್‌ ವಿಮಾನವು ನನ್ನನ್ನು ಬಿಟ್ಟು ತೆರಳಿದೆ’ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮುಖಂಡ ಹಾಗೂ ಸಂಸದ ರಾಜು ಶೆಟ್ಟಿ ಆರೋಪಿಸಿದ್ದಾರೆ.‘ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ನಾನು ಕಾಯುತ್ತಿದೆ. ವಿಮಾನ ಹತ್ತಲು ತೆರಳುವ ದ್ವಾರವನ್ನು ಮುಚ್ಚಿರುವುದು ನನ್ನ ಗಮನಕ್ಕೆ ಬಂತು. ವಿಚಾರಿಸಿದಾಗ ವಿಮಾನ ಹೊರಟಿರುವುದಾಗಿ ತಿಳಿಸಿದ್ದಾರೆ’ ಎಂದು ಶೆಟ್ಟಿ ತಿಳಿಸಿದ್ದಾರೆ.‘ನಾನು  ₹ 2000 ಹೆಚ್ಚುವರಿ ಪಾವತಿಸಿದ್ದೆ. ಇದರಲ್ಲಿ ನನ್ನ ತಪ್ಪಿಲ್ಲ’ ಎಂದು ಹೇಳಿದ್ದಾರೆ. ‘ಶೆಟ್ಟಿ ಅವರು ಸಮಯಕ್ಕೆ ಸರಿಯಾಗಿ ವಿಮಾನ ಹತ್ತಲು ತೆರಳುವ ದ್ವಾರದ ಬಳಿಗೆ ತಲುಪಿರಲಿಲ್ಲ’ ಎಂದು ಜೆಟ್ ಏರ್‌ವೇಸ್‌ ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry