₹ 40.03 ಕೋಟಿ ತೆರಿಗೆ ಬಾಕಿ

7
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ತೆರಿಗೆ ಲೆಕ್ಕಾಚಾರ

₹ 40.03 ಕೋಟಿ ತೆರಿಗೆ ಬಾಕಿ

Published:
Updated:
₹ 40.03 ಕೋಟಿ ತೆರಿಗೆ ಬಾಕಿ

ಹುಬ್ಬಳ್ಳಿ: ಇಲ್ಲಿನ ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿಯ ಗೃಹ, ವಾಣಿಜ್ಯ ಹಾಗೂ ಖಾಲಿ ನಿವೇಶನ­ಗಳಿಂದ ಬರಬೇಕಾದ ₹ 40.03 ಕೋಟಿ ಆಸ್ತಿ ತೆರಿಗೆಯು ಬಾಕಿ ಉಳಿದುಕೊಂಡಿದೆ.ಒಟ್ಟು ಪಾಲಿಕೆ ವ್ಯಾಪ್ತಿಯಲ್ಲಿರುವ 2,48,500 ಆಸ್ತಿಗಳಿಂದ ಪ್ರಸಕ್ತ ವರ್ಷ ₹ 46.74 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಇದರ ಜತೆಗೆ ಹಿಂದಿನ ವರ್ಷಗಳ ₹ 9.05 ಕೋಟಿ ಬಾಕಿ ಇದೆ. ಎರಡೂ ಸೇರಿ ಒಟ್ಟು ₹ 58.90 ಕೋಟಿ ವಸೂಲಿ ಮಾಡಬೇಕಾಗಿದೆ. ಇದರಲ್ಲಿ ಪ್ರಸಕ್ತ ವರ್ಷದಲ್ಲಿ ಸಂಗ್ರಹವಾಗ­ಬೇಕಿರುವ ತೆರಿಗೆಯೂ ಸೇರಿಕೊಂಡಿದೆ.ಪ್ರಸಕ್ತ ವರ್ಷ ದಾಖಲೆ ಪ್ರಮಾಣದ ₹ 19.90 ಕೋಟಿ ತೆರಿಗೆಯನ್ನು ಆಸ್ತಿಗಳ ಮಾಲೀಕರು ಪಾವತಿಸಿದ್ದಾರೆ. ಆ ಮೂಲಕ ಕೆಲವರು ಶೇ 5 ರಷ್ಟು ರಿಯಾಯ್ತಿಯ ಲಾಭ ಪಡೆದು­ಕೊಂಡಿದ್ದರೆ, ಇನ್ನೂ ಕೆಲವರು ದಂಡ ಪಾವತಿ ಮಾಡುವುದರಿಂದ ತಪ್ಪಿಸಿಕೊಂಡಿದ್ದಾರೆ.ಏಪ್ರಿಲ್‌ 1ರಿಂದ ಮೇ ಅಂತ್ಯದವರೆಗೆ ₹19.90 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಲಾಗಿದ್ದು, ಅದರಲ್ಲಿ ₹ 18.86 ಕೋಟಿ ಆಸ್ತಿ ತೆರಿಗೆಯಾಗಿದ್ದರೆ, ₹ 1.04 ಕೋಟಿ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎನ್ನುತ್ತಾರೆ ಕಂದಾಯ­ಧಿಕಾರಿ ಇಸ್ಲಾಯಿಲ್‌ ಸಾಹೇಬ ಶಿರಹಟ್ಟಿ.ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ಬರುವ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ಪಾಲಿಕೆ ಸಿಬ್ಬಂದಿಯೇ ಮನೆಗಳಿಗೆ ತೆರಳಿ ತೆರಿಗೆ ವಸೂಲಿ ಮಾಡುತ್ತಿದ್ದರು. ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆ ಜಾರಿ ನಂತರ ಜನರೇ ತೆರಿಗೆ ಘೋಷಿಸಿಕೊಂಡು ತೆರಿಗೆ ಪಾವತಿ ಮಾಡುತ್ತಿದ್ದಾರೆ.ಬಾಕಿ ಉಳಿಸಿಕೊಂಡಿರುವ ತೆರಿಗೆ­ದಾರರಿಂದ ಮಾತ್ರ ಪಾಲಿಕೆ ಸಿಬ್ಬಂದಿ ವಸೂಲಿ ಮಾಡುತ್ತಾರೆ. ಆದರೆ, ತೆರಿಗೆ ವಸೂಲಿಗೆ ಬೇಕಾದಷ್ಟು ಸಿಬ್ಬಂದಿ ಪಾಲಿಕೆಯಲ್ಲಿ ಇಲ್ಲ. ಹಾಗಾಗಿ ತೆರಿಗೆ ಸಂಗ್ರಹದ ಗುರಿ ತಲುಪಲು ಕೆಲವೊಂದು ವರ್ಷ ಸಾಧ್ಯವಾಗುತ್ತಿಲ್ಲ.ಪ್ರಸಕ್ತ ವರ್ಷದ ತೆರಿಗೆ ವಸೂಲಿ ಗುರಿ ತಲುಪಲು ಪಾಲಿಕೆ ಸಿಬ್ಬಂದಿಗೆ ಕಷ್ಟ­ವಾಗುತ್ತಿಲ್ಲ. ಆದರೆ, ಹಿಂದಿನ ವರ್ಷ­ಗಳಿಂದ ಉಳಿದುಕೊಂಡು ಬಂದಿರುವ ಬಾಕಿ ವಸೂಲಿ ಸವಾಲಾಗಿದೆ.

*

‘ಸಿಬ್ಬಂದಿ ಕೊರತೆಯ ನಡುವೆಯೂ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಬಾಕಿ ತೆರಿಗೆ ವಸೂಲಿಗೆ ಈಗಾಗಲೇ ನಮ್ಮ ಸಿಬ್ಬಂದಿಗೆ ಸೂಚಿಸಲಾಗಿದೆ’.

-ಇಸ್ಲಾಯಿಲ್‌ ಸಾಹೇಬ ಶಿರಹಟ್ಟಿ,

ಕಂದಾಯಾಧಿಕಾರಿ, ಹು–ಧಾ ಪಾಲಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry