ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 15 ಜೂನ್ 2017, 19:30 IST
ಅಕ್ಷರ ಗಾತ್ರ

ಸಿಲಿಕಾನ್ ಸಿಟಿ

‘ಸಿಲಿಕಾನ್ ಸಿಟಿ’ ಹೆಸರಿನ ಚಿತ್ರ ತಮಿಳಿನ ‘ಮೆಟ್ರೊ’ ಚಿತ್ರದಿಂದ ಸ್ಫೂರ್ತಿ ಪಡೆದು ತೆರೆಗೆ ಬರುತ್ತಿದೆ. ಇದರ ನಿರ್ದೇಶನ ಮುರಳಿ ಗುರಪ್ಪ ಅವರದ್ದು. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಕಥೆಯನ್ನು ಇದು ಹೊಂದಿದೆ. ಅನೂಪ್ ಸೀಳಿನ್ ಅವರ ಸಂಗೀತ, ಶ್ರೀನಿವಾಸ ರಾಮಯ್ಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಶ್ರೀನಗರ ಕಿಟ್ಟಿ, ಸೂರಜ್ ಗೌಡ, ಕಾವ್ಯ ಶೆಟ್ಟಿ, ಏಕ್ತಾ ರಾಥೋಡ್, ಚಿಕ್ಕಣ್ಣ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

***
ಚಿತ್ತ ಚಂಚಲ

(ಚಿತ್ತ ಚಂಚಲ- ದಿವಂ ಕುಂದರ್)

ಕರಾವಳಿಯ ಸಂಸ್ಕೃತಿ, ಭೂತಾರಾಧನೆ, ಪ್ರಕೃತಿ ಸೌಂದರ್ಯವನ್ನು ತೋರಿಸುವ ಚಿತ್ರ ಇದು. ವೈಕು ಸುಂದರ್ ಅವರ ನಿರ್ದೇಶನ, ರಾಜೇಶ್ ರಾಜ್ ಅವರ ಸಂಗೀತ, ಕುಮಾರ್ ಚಕ್ರವರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಸ್ಪೆನ್ಸ್ ಮತ್ತು ಥ್ರಿಲ್ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ದಿವಮ್ ಕುಂದರ್, ಚಿತ್ರಾ ಶೆಣೈ, ಪ್ರಕಾಶ್ ಹೆಗ್ಗೋಡು ಮತ್ತಿತರರು ತಾರಾಗಣದಲ್ಲಿ ಇದ್ದಾರೆ.

***
ಸ್ಟೂಡೆಂಟ್ಸ್

(ಸ್ಟೂಡೆಂಟ್ಸ್‌- ಕಿರಣ್ ರಾಯಬಾಗಿ, ಸಚಿನ್ ಪುರೋಹಿತ್, ರಮಣ್ ರನ್ವೀರ್, ಸಚಿವ ಹೊಸಮನೆ)

ಸಂತೋಷ್ ಕುಮಾರ್ ಅವರು ಈ ಚಿತ್ರದ ನಿರ್ದೇಶಕರು. ಕಾಲೇಜು ಜೀವನಕ್ಕೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಹಾಸ್ಯಮಯ ಧಾಟಿಯಲ್ಲಿ ಹೇಳುವ ಸಿನಿಮಾ ಇದು ಎಂದು ಅವರು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಬಹುತೇಕರು ಹೊಸ ಕಲಾವಿದರು. ಎಡ್ವರ್ಡ್ ಷಾ ಹಾಗೂ ಬಿ.ಜೆ. ಭರತ್ ಅವರ ಸಂಗೀತ, ಜೆ.ಜೆ. ಶರ್ಮ ಛಾಯಾಗ್ರಹಣ ಚಿತ್ರಕ್ಕಿದೆ. ದಿಲೀಪ್ ಪೈ, ನಕುಲ್, ಕಿರಣ್, ಸಚಿನ್ ಹೊಸಮನೆ, ಸಚಿನ್ ಪುರೋಹಿತ್, ಕಾವ್ಯಾ, ಸ್ವಾತಿ, ಭವ್ಯಾ ಹಾಗೂ ಇತರರು ತಾರಾಬಳಗದಲ್ಲಿ ಇದ್ದಾರೆ.

***
ಟೈಗರ್

(ಟೈಗರ್‌- ಪ್ರದೀಪ್‌, ನೈರಾ ಬ್ಯಾನರ್ಜಿ)

ಚಿಕ್ಕಬೋರಮ್ಮ ಅವರು ನಿರ್ಮಿಸಿರುವ, ನಂದಕಿಶೋರ್ ನಿರ್ದೇಶನದ ಚಿತ್ರ ಇದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರದೀಪ್, ಮಧುರಿಮಾ, ಕೆ.ಶಿವರಾಂ, ರವಿಶಂಕರ್, ಸಾಧು ಕೋಕಿಲ, ರಂಗಾಯಣ ರಘು ಮುಂತಾದವರು ತಾರಾಬಳಗದಲ್ಲಿದ್ದಾರೆ.

***
ಭಗವದ್ ಶ್ರೀರಾಮಾನುಜ
ರಾಮಾನುಜಾಚಾರ್ಯರ ಜೀವನವನ್ನೇ ಕಥಾವಸ್ತು ಆಗಿಸಿಕೊಂಡಿರುವ ಈ ಚಿತ್ರ ಬೆಂಗಳೂರು, ಹಾಸನ ಮತ್ತು ಮೈಸೂರಿನಲ್ಲಿ ಮೊದಲ ಹಂತದಲ್ಲಿ ಬಿಡುಗಡೆ ಆಗಲಿದೆ. ಸಾಯಿಪ್ರಕಾಶ್ ಅವರು ಇದರಲ್ಲಿ ರಾಮಾನುಜಾಚಾರ್ಯರ ಪಾತ್ರ ನಿರ್ವಹಿಸಿದ್ದಾರೆ. ರಾಜಾ ರವಿಶಂಕರ್ ಇದರ ನಿರ್ದೇಶಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT