ಕೊಚ್ಚಿ ಮೆಟ್ರೊ ಉದ್ಘಾಟನೆ ನಾಳೆ ಅತಿಥಿಗಳ ಪಟ್ಟಿಗೆ ಶ್ರೀಧರನ್‌ ಸೇರ್ಪಡೆ

7

ಕೊಚ್ಚಿ ಮೆಟ್ರೊ ಉದ್ಘಾಟನೆ ನಾಳೆ ಅತಿಥಿಗಳ ಪಟ್ಟಿಗೆ ಶ್ರೀಧರನ್‌ ಸೇರ್ಪಡೆ

Published:
Updated:
ಕೊಚ್ಚಿ ಮೆಟ್ರೊ ಉದ್ಘಾಟನೆ ನಾಳೆ ಅತಿಥಿಗಳ ಪಟ್ಟಿಗೆ ಶ್ರೀಧರನ್‌ ಸೇರ್ಪಡೆ

ಕೊಚ್ಚಿ: ಶನಿವಾರ  ನಡೆಯಲಿರುವ ಕೇರಳದ ಕೊಚ್ಚಿ ಮೆಟ್ರೊ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಪಾಲ್ಗೊಳ್ಳುವ ಅತಿಥಿಗಳ ಪಟ್ಟಿಗೆ ‘ಮೆಟ್ರೊ ಮ್ಯಾನ್‌’ ಖ್ಯಾತಿಯ ಇ. ಶ್ರೀಧರನ್‌  ಅವರ ಹೆಸರೂ ಸೇರ್ಪಡೆಯಾಗಿದೆ.

‘ಶ್ರೀಧರನ್‌ ಹಾಗೂ ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತ್ತಲ ಅವರ ಹೆಸರನ್ನು ಪಟ್ಟಿಗೆ ಸೇರಿಸಿರುವುದಾಗಿ ಮುಖ್ಯಮಂತ್ರಿ  ಕಚೇರಿಗೆ ಪ್ರಧಾನಿ ಕಾರ್ಯಾಲಯ ಸೂಚಿಸಿದೆ  ’ ಎಂದು ಮೂಲಗಳು ತಿಳಿಸಿವೆ

ಕೊಚ್ಚಿ ಮೆಟ್ರೊದ ಪ್ರಧಾನ ಸಲಹೆಗಾರರಾದ ಇ. ಶ್ರೀಧರನ್‌ ಅವರ ಹೆಸರು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. ‘ಇದನ್ನು ವಿವಾದ ಮಾಡುವ ಅಗತ್ಯವಿಲ್ಲ. ಪ್ರಧಾನಿ ಅವರ ಭದ್ರತೆ ಮುಖ್ಯ’ ಎಂದು ಮೆಟ್ರೊ ಸಂಚಾರ ಸಿದ್ಧತೆ ಪರಿಶೀಲನೆ ಬಳಿಕ ಇ. ಶ್ರೀಧರನ್‌ ಹೇಳಿದ್ದರು.

2ನೇ ಹಂತದ ನಿರ್ಮಾಣ ಕೈಗೊಳ್ಳುವ ಸಾಮರ್ಥ್ಯವನ್ನು ಕೊಚ್ಚಿ ಮೆಟ್ರೊ ರೈಲು ಲಿಮಿಟೆಡ್‌ ಹೊಂದಿದೆ. ಹೀಗಾಗಿ ಇದರಲ್ಲಿ ತಾವು ಭಾಗಿಯಾಗುವುದಿಲ್ಲ ಎಂಬ ಶ್ರೀಧರನ್‌ ಸುಳಿವು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry