ಮಂಗಳವಾರ, ಸೆಪ್ಟೆಂಬರ್ 29, 2020
22 °C

ತೆಂಗು ಕೀಟ ಬಾಧೆ ನಿಯಂತ್ರಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ಕಲ್ಲಾಪು ಭಾಗದಲ್ಲಿ 9 ಲಕ್ಷ  ಪರೋಪ ಜೀವಿಗಳನ್ನು  ತೆಂಗಿನ ಮರಗ ಳಿಗೆ ಬಿಟ್ಟಿದ್ದರೂ ಕೀಟಗಳ ಪ್ರಮಾಣ ಅಧಿ ಕವಾಗಿದ್ದು,  ನಿಯಂತ್ರಣಕ್ಕೆ ತರಲು ಅಸಾ ಧ್ಯವಾಗಿದೆ. ಮಳೆ ಕಡಿಮೆಯಾಗಿ ಬಿಸಿಲಿನ ತಾಪವೂ ಹೆಚ್ಚಾಗಿದ್ದರಿಂದಾಗಿ  ಚಿಕ್ಕ ಕೀಟಗಳು ದೊಡ್ಡದಾಗಿ ಬೆಳೆದು ಭಾಗಶಃ ತೆಂಗಿನ ಮರಗಳು ರೋಗಕ್ಕೆ ತುತ್ತಾಗಿವೆ ಎಂದು  ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸೀಮಾ ಹೇಳಿದರು.

ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆ, ಮಂಗಳೂರು ತೆಂಗು ಉತ್ಪಾ ದಕರ ಜಿಲ್ಲಾ ಫೆಡರೇಶನ್,  ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವ ದಲ್ಲಿ ತೊಕ್ಕೊಟ್ಟಿನ ಯೂನಿಟಿ ಹಾಲ್ ನಲ್ಲಿ ಬುಧವಾರ ನಡೆದ ತೆಂಗು ಬೆಳೆಯ ಕಪ್ಪು ತಲೆ ಹುಳು ಬಾಧೆಯ ನಿಯಂತ್ರಣ ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಫೆಬ್ರುವರಿ ತಿಂಗಳಲ್ಲಿ ಕಾಸರ ಗೋಡಿನ ಸಿಪಿಸಿಆರ್‍ಐ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ವಿಜ್ಞಾನಿಗಳ  ನೇತೃತ್ವದಲ್ಲಿ  ಪ್ರತಿ ಮರಕ್ಕೆ  20  ಪರೋಪಜೀವಿಗಳನ್ನು ಬಿಡಲಾಗಿತ್ತು. ಬಿಸಿಲಿನ ತಾಪಮಾನದಿಂದಾಗಿ ಅದು ನಿಯಂತ್ರಣಕ್ಕೆ ಬರಲಿಲ್ಲ. ಮರಗ ಳಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಕೀಟ ಬಾಧಿಸಿದೆ. ಚಳಿಗಾಲದಲ್ಲಿ ಕೀಟ ಬಾಧಿಸಿದರೂ  ಬೇಸಿಗೆಯಲ್ಲಿ ಒಣಗಿದ  ಎಲೆಗಳ ಮೂಲಕ ಅದು ಬೆಳಕಿಗೆ ಬಂದಿತ್ತು’ ಎಂದರು.

‘ಕೀಟ ಬಾಧೆ ಕ್ಯಾನ್ಸರ್ ಇದ್ದಂತೆ ಪ್ರಾಥಮಿಕ ಹಂತದಲ್ಲಿರುವಾಗಲೇ  ಪರೋಪಜೀವಿಗಳನ್ನು ಬಿಡುತ್ತಿದ್ದಲ್ಲಿ ನಿಯಂತ್ರಣ ಸಾಧ್ಯವಾಗುತಿತ್ತು.  ಆದರೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಯಿಂದ ಅಸಾಧ್ಯವಾಗಿತ್ತು. ತೆಂಗಿನ  ಗರಿಗ ಳಲ್ಲಿ ಇರುವಂತಹ ಕ್ಲೋರೊಫಿಲ್ ಕಡಿ ಮೆಗೊಳಿಸುವ ಕಾರ್ಯವನ್ನು ಕೀಟಗಳು ಮಾಡುವುದರಿಂದ  ಮರಗಳು ಸಾಯುವ ಹಂತಕ್ಕೆ ತಲುಪಿವೆ.  

ಕಲ್ಲಾಪು ವಿನಿಂದ ತೊಕ್ಕೊಟ್ಟು ಭಾಗದಲ್ಲಿನ ತೆಂಗಿನ ಮರಗಳು ಸಾಯಲು ಕೀಟಬಾ ಧೆಯ ಜತೆಗೆ ಬರ ಕೂಡಾ ಕಾರಣ ವಾಗಿದೆ’ ಎಂದರು. ‘ತೆಂಗಿನ ಮರಗಳಿಗೆ ಪೊಟ್ಯಾಷ್ ನೀಡಿದಲ್ಲಿ ಪೌಷ್ಟಿಕಾಂಶಯುಕ್ತವಾಗಿದ್ದು, ಯೂರಿಯಾದಿಂದ ಮೇಲ್ನೋಟಕ್ಕೆ  ಉತ್ತಮವಾಗಿ ತೆಂಗು ಕಂಡುಬಂದರೂ ಪೌಷ್ಟಿಕಾಂಶದ ಕೊರತೆ ಅಧಿಕವಾಗಿ ರುತ್ತದೆ. ಈ ನಿಟ್ಟಿನಲ್ಲಿ ರೈತರು ಪೊಟಾಷ್ ಸಿಂಪಡಿಸಿದಲ್ಲಿ  ಹುಳುಗಳ ಬಾಧೆಯನ್ನು ತಡೆಗಟ್ಟಬಹುದು’ ಎಂದರು.

ತೆಂಗಿಗೆ ಪುನಶ್ಚೇತನ ಯೋಜನೆ 

ತೆಂಗಿನ  ತೋಟಗಳ ಪುನಶ್ಚೇತನ  ಹಾಗೂ ಮರುನಾಟಿ ಮತ್ತು ನಿರ್ವಹಣೆಗಾಗಿ ಪ್ರತಿ ಫಲಾನುಭವಿಗೆ 0.4 ಹೆಕ್ಟರ್‌ ನಿಂದ ಗರಿಷ್ಠ  1 ಹೆಕ್ಟೇರ್ ವರೆಗೆ ₹ 44,750ಗಳನ್ನು ಮೊದಲ ವರ್ಷ  ಹಾಗೂ ₹ 8,750 ಅನ್ನು ಎರಡನೇ  ವರ್ಷದ ನಿರ್ವಹಣೆಗೆ  ಸಹಾಯಧನ ನೀಡಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸೀಮಾ ಹೇಳಿದರು.  

ತೆಂಗಿನ ತೋಟಗಳಲ್ಲಿ ಅನುತ್ಪಾದಕ  ಹಾಗೂ ರೋಗ ಕೋಟ ಬಾಧೆಗೊಳಗಾದ ಗಿಡಗಳನ್ನು ಬುಡಸಮೇತ ಕತ್ತರಿಸಿ ತೆಗೆಯಲು ಪ್ರತಿ ಗಿಡಕ್ಕೆ   ₹1000ಗಳಂತೆ ಹೆಕ್ಟೇರಿಗೆ  ಗರಿಷ್ಠ  32 ಗಿಡಗಳನ್ನು ತೆಗೆಯಲು  ₹ 32,000 ಸಹಾಯಧನ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು. 

ಅಧಿಕ ಇಳುವರಿ ನೀಡುವ  ಹೈಬ್ರೀಡ್ ಗಿಡ್ಡ/ಎತ್ತರದ ತಳಿಗಳನ್ನು ಮರು ನಾಟಿ ಮಾಡಲು  ಪ್ರತಿ ಗಿಡಕ್ಕೆ  ₹80 ರಂತೆ ಹೆಕ್ಟೇರಿಗೆ ₹4,000 , ತೆಂಗಿನ ತೋಟಗಳ ಮಣ್ಣು ಮಾದರಿ ಪರೀಕ್ಷೆ ಆಧಾರದ ಮೇರೆಗೆ ಸಮತೋಲನ ಪೋಷಕಾಂಶಗಳನ್ನು ಗಿಡಗಳಿಗೆ ಒದಗಿಸಲು, ನೀರಿನ ನಿರ್ವಹಣೆ ಮತ್ತು ಬಸಿಗಾಲುವೆ ನಿರ್ಮಾಣ, ಹಸಿರೆಲೆ ಗೊಬ್ಬರ/ ಹೊದಿಕೆ ಬೆಳೆ ನಾಟಿ ಮಾಡಲು, ನೀರು ಮತ್ತು ತೇವಾಂಶ ಸಂರಕ್ಷಣೆ ಕೈಗೊಳ್ಳಲು, ಅಗತ್ಯವಿರುವ ಸಸ್ಯ ಸಂರಕ್ಷಣಾ ಕ್ರಮ ಅನುಸರಿಸಲು  ₹17,500 ಎರಡು ವಾರ್ಷಿಕ ಕಂತುಗಳಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಚಾಲನೆ ನೀಡಿದರು. ಸಿಪಿಸಿಆರ್ ಐ ಕಾಸರಗೋಡಿನ  ಅಧಿಕಾರಿ ಪ್ರತಿಭಾ  ಹುಳು ಭಾದೆಯ  ನಿರ್ವಹಣೆ ಹಾಗೂ ಲಕ್ಷಣಗಳ ಮಾಹಿತಿ ನೀಡಿದರು. ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ತಾಲೂಕು ಪಂಚಾಯಿತಿ ಸದಸ್ಯೆ ಸುರೇಖಾ ಚಂದ್ರಹಾಸ್ , ನಗರಸಭೆ ಸದಸ್ಯ ಯು.ಇಸ್ಮಾಯಿಲ್ ಇದ್ದರು.

* * 

ಮೊನೊಕ್ರೊಟೋಪಸ್ ರಾಸಾಯನಿಕವನ್ನು ಮರದ ಜೀವಂತ ಬೇರು ತುಂಡರಿಸಿ ಅದಕ್ಕೆ ಕಟ್ಟಿ  ಸಿಂಪಡಿಸುವ ವಿಧಾನವನ್ನು ಅನುಸರಿಸುವ ಮೂಲಕ  ಕಪ್ಪು ಹುಳು ತಲೆ ಬಾಧೆ ನಿಯಂತ್ರಣಕ್ಕೆ ಬಂದಿತ್ತು.

ಸುಂದರ್ ಉಳಿಯ

ಉಳ್ಳಾಲ ನಗರಸಭೆ ಸದಸ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.