ಕೊಚ್ಚಿ ಮೆಟ್ರೊ ಯೋಜನೆ ಸಾಕಾರಗೊಳ್ಳಲು ಮೋದಿ ಕಾರಣ: ಬಿಜೆಪಿ ಪೋಸ್ಟರ್ ವಿರುದ್ಧ ಟೀಕೆ

7

ಕೊಚ್ಚಿ ಮೆಟ್ರೊ ಯೋಜನೆ ಸಾಕಾರಗೊಳ್ಳಲು ಮೋದಿ ಕಾರಣ: ಬಿಜೆಪಿ ಪೋಸ್ಟರ್ ವಿರುದ್ಧ ಟೀಕೆ

Published:
Updated:
ಕೊಚ್ಚಿ ಮೆಟ್ರೊ ಯೋಜನೆ ಸಾಕಾರಗೊಳ್ಳಲು ಮೋದಿ ಕಾರಣ: ಬಿಜೆಪಿ ಪೋಸ್ಟರ್ ವಿರುದ್ಧ ಟೀಕೆ

ಕೊಚ್ಚಿ: ಕೊಚ್ಚಿ ಮೆಟ್ರೊ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ಆಗಮಿಸುತ್ತಿರುವ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕೊಚ್ಚಿ ನಗರದಾದ್ಯಂತ ವಿವಿಧ ರೀತಿಯ ಹೋರ್ಡಿಂಗ್‍ಗಳು ಕಾಣಿಸಿಕೊಂಡಿದ್ದು ಇದರಲ್ಲಿ ಬಿಜೆಪಿಯ ಪೋಸ್ಟರ್‍‍ ಎಲ್ಲದಕ್ಕಿಂತಲೂ ಭಿನ್ನವಾಗಿತ್ತು.

ಬಿಜೆಪಿಯ ಸ್ವಾಗತ ಪೋಸ್ಟರ್‍‍ನಲ್ಲಿ 'ಕೊಚ್ಚಿ ಮೆಟ್ರೊ ಯೋಜನೆ ಸಾಕಾರಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು' ಎಂದು ಬರೆದಿದ್ದು, ಈ ಪೋಸ್ಟರ್ ಟೀಕೆಗೆ ಗುರಿಯಾಗಿದೆ.

ಕೊಚ್ಚಿ ಮೆಟ್ರೊ ಯೋಜನೆಗೆ ಚಾಲನೆ ನೀಡಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್.  ಮೇ 2009- ಮೇ 2014ರ ಅವಧಿಯಲ್ಲಿ ಕೊಚ್ಚಿ ಮೆಟ್ರೊ ಯೋಜನೆಗೆ ಚಾಲನೆ ಸಿಕ್ಕಿತ್ತು. ಅಂದರೆ ಇದು ಯುಪಿಎ ಸರ್ಕಾರದ ಅವಧಿಯಲ್ಲಿನ ಯೋಜನೆ. ಆದರೆ ಕೇರಳ ಬಿಜೆಪಿ, ಈ ಯೋಜನೆಯ ಯಶಸ್ಸು ಮೋದಿ ಸರ್ಕಾರದ್ದು ಎಂದು ಹೇಳಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‍ ಪಕ್ಷದ ರಚಿತ್ ಸೇತ್ ಅವರು ಟ್ವೀಟ್ ಮಾಡಿದ್ದಾರೆ.

ಸೆಪ್ಟಂಬರ್ 13,  2012ರಂದು ಮನಮೋಹನ್ ಸಿಂಗ್ ಅವರು ಕೊಚ್ಚಿ ಮೆಟ್ರೊ ಶಂಕುಸ್ಥಾಪನೆ ಮಾಡಿದ್ದರು.

ಈ ಪೋಸ್ಟರ್‍‍ಗೆ ಸಂಬಂಧಪಟ್ಟಂತೆ ಬಿಜೆಪಿಯ ಸುಳ್ಳು ಎಂಬ ಮೀಮ್ ಕೂಡಾ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಸರ್ಕಾರ ಕೂಡಾ ಕೊಚ್ಚಿ ಮೆಟ್ರೊ ಯೋಜನೆ ನಮ್ಮದು ಎಂದು ವಾದಿಸುತ್ತಿಲ್ಲ. ಆದರೆ ಬಿಜೆಪಿ ಮಾತ್ರ ಕೊಚ್ಚಿ ಮೆಟ್ರೊ ಯೋಜನೆ ಕೂಡಾ ಮೋದಿ ಸರ್ಕಾರದ ಸಾಧನೆ ಎಂದು ಬೀಗುತ್ತಿದೆ ಎಂಬ ಅಭಿಪ್ರಾಯಗಳು ಸಾಮಾಜಿಕ ತಾಣದಲ್ಲಿ ಪ್ರಕಟವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry