ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ

Last Updated 18 ಜೂನ್ 2017, 8:43 IST
ಅಕ್ಷರ ಗಾತ್ರ

ಮೂಡುಬಿದಿರೆ: ನರೇಗಾ ಯೋಜನೆ ಯಡಿ ಪಡುಮಾರ್ನಡು ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ನಡೆದ ರಸ್ತೆ ಕಾಂಕ್ರಿ ಟೀಕರಣ ಮತ್ತು ಕಿಂಡಿ ಅಣೆಕಟ್ಟು ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದ ಬಗ್ಗೆ ಓಂಬು ಡ್ಸ್‌ಮನ್‌  ನರಸಿಂಹ ಮೊಗೇರ ಶುಕ್ರವಾರ ಪಡುಮಾರ್ನಾಡು  ಪಂಚಾ ಯಿತಿ ಕಚೇರಿಯಲ್ಲಿ ವಿಚಾರಣೆ ನಡೆಸಿದರು.

ಸುಮಾರು ₹5 ಲಕ್ಷ ವೆಚ್ಚದಲ್ಲಿ ರಚನೆ ಗೊಂಡ ಜನತಾ ಕಾಲೋನಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ನಟರಾಜ್ ಎಂಬವರು ವಹಿಸಿಕೊಂಡು ವಿಜಯಪುರ ಮೂಲದ ಕಾರ್ಮಿಕರಿಂದ ಕೆಲಸ ಮಾಡಿಸಿದ್ದಾರೆ. ಗುಮ್ಮಡಬೆಟ್ಟು ನಲ್ಲಿ ರಚನೆಗೊಂಡ ಸುಮಾರು ₹ 4.99 ಲಕ್ಷ ವೆಚ್ಚದ ಕಿಂಡಿಅಣೆಕಟ್ಟು ಗುತ್ತಿಗೆ ಯನ್ನು ಪರೋಕ್ಷವಾಗಿ ಪಂಚಾಯಿತಿ ಸದಸ್ಯ ಅಭಿನಂದನ್ ವಹಿಸಿಕೊಂಡು ತನ್ನ ಹತ್ತಿರದ ಸಂಬಂಧಿಕರಲ್ಲಿ ಕೆಲಸ ಮಾಡಿಸಿಕೊಂಡಿದ್ದಾರೆ.

ಎರಡೂ ಕಾಮಗಾರಿಗಳಲ್ಲಿ ಜಾಬ್ ಕಾರ್ಡ್‌ ಇದ್ದ ಗ್ರಾಮದ ಕೂಲಿ ಕಾರ್ಮಿಕರನ್ನು ಬಳಸಿ ಕೊಳ್ಳದೆ ಹೊರಗಿನವರನ್ನು ಬಳಸಿ ಕೊಂಡು ಹಣ ಡ್ರಾ ಮಾಡಲಾಗಿದೆ. ಕಾಮಗಾರಿಯ ಗುಣಮಟ್ಟ ಕೂಡ ಕಳಪೆಯಾಗಿತ್ತು, ಕೆಲಸಕ್ಕೆ ಯಂತ್ರಗಳನ್ನು ಉಪಯೋಗಿಸಲಾಗಿದೆ ಎಂದು ಪಂಚಾ ಯತ್ ಮಾಜಿ ಅಧ್ಯಕ್ಷ ಮಹ್ಮದ್ ಅಸ್ಲಂ ಅವರು ದೂರಿನಲ್ಲಿ ತಿಳಿಸಿದ್ದರು.

ವಿಚಾರಣೆ ನಡೆಸಿದ ಓಂಬುಡ್ಸ್‌ಮನ್‌ ಎರಡೂ ಕಡೆಯವರ ಹೇಳಿಕೆಗಳನ್ನು ಪಡೆದುಕೊಂಡರು. ಎರಡು ಕಾಮಗಾರಿ ಗಳಲ್ಲಿ ಸುಮಾರು 70 ಮಂದಿ ಕಾರ್ಮಿ ಕರು ಕೆಲಸ ಮಾಡಿದ್ದರು. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಪಂಚಾಯಿತಿ ಸದಸ್ಯರೊಬ್ಬರ ಸಂಬಂಧಿಕರನ್ನು ಮಾತ್ರ ವಿಚಾರಣೆಗೆ ಕರೆಸಿ ಹೇಳಿಕೆ ಪಡೆದು ಕೊಳ್ಳವುದಕ್ಕೆ ಅಸ್ಲಂ ಆಕ್ಷೇಪ ವ್ಯಕ್ತಪಡಿಸಿ, ಕೆಲಸ ಮಾಡಿದ ಗುತ್ತಿಗೆದಾರರನ್ನು ಹಾಗೂ ಎಲ್ಲ ಕಾರ್ಮಿಕರನ್ನು ವಿಚಾರಣೆಗೆ ಕರೆಸಿ ಹೇಳಿಕೆ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.

ದಾಖಲೆಪತ್ರಗಳು ಸರಿ ಇವೆ: ದಾಖಲೆಪತ್ರಗಳನ್ನು ಪರಿಶೀಲಿಸಿದಾಗ ಸರಿ ಇದೆ, ನರೇಗಾ ಯೋಜನೆಯಲ್ಲಿ ನಡೆದ ಎರಡು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿ ಆ ಮೂಲಕ ವಿಚಾರಣೆ ನಡೆಸಿ ತೀರ್ಪು ನೀಡಲಾಗುವುದು ಎಂದು ಓಂಬುಡ್ಸ್‌ ಮನ್‌ ನರಸಿಂಹ ಮೊಗೇರ ಮಾಧ್ಯಮಕ್ಕೆ ತಿಳಿಸಿದರು.

ದೂರಿನಲ್ಲಿ ಸತ್ಯಾಂಶವಿಲ್ಲ:
ಈ ಹಿಂದೆ ಜಲಾನಯನ ಯೋಜನೆಯಡಿ ನಡೆದ ಅನೇಕ ಕಾಮಗಾರಿಗಳು ಕಳಪೆಯಾಗಿದ್ದು ಕಾಮಗಾರಿ ವೇಳೆ ಕಾನೂನು ಉಲ್ಲಂಘಿಸಲಾಗಿತ್ತು. ಗ್ರಾಮ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಇದರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಲು ಪಂಚಾಯಿತಿ ಆಡಳಿತ ಪೂರಕ ದಾಖಲೆಗಳನ್ನು ಸಂಗ್ರಹಿಸುತ್ತಿತ್ತು. ಇದನ್ನು ತಪ್ಪಿಸಲು ನರೇಗಾ ಕಾಮಗಾರಿಯ ಬಗ್ಗೆ ಅವ್ಯವಹಾರದ ಆರೋಪ ಹೊರಿಸಲಾಗಿದ್ದು ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಪಡುಮಾರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಾಥ್ ಸುವರ್ಣ ಮಾಧ್ಯಮಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT