ಪರಿಶಿಷ್ಟ ವಿದ್ಯಾರ್ಥಿನಿಲಯಕ್ಕೆ ಗ್ರಹಣ

7

ಪರಿಶಿಷ್ಟ ವಿದ್ಯಾರ್ಥಿನಿಲಯಕ್ಕೆ ಗ್ರಹಣ

Published:
Updated:
ಪರಿಶಿಷ್ಟ ವಿದ್ಯಾರ್ಥಿನಿಲಯಕ್ಕೆ ಗ್ರಹಣ

ಬಳ್ಳಾರಿ: ಪದವಿ ತರಗತಿಯ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆಂದೇ ಒಂದು ವರ್ಷದ ಹಿಂದೆ ನಿರ್ಮಾಣ ವಾಗಿರುವ ಈ ವಿದ್ಯಾರ್ಥಿನಿಲಯ ಇನ್ನೂ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಹಸ್ತಾಂತರ ಗೊಂಡಿಲ್ಲ. ಪರಿಣಾಮವಾಗಿ ವಿದ್ಯಾರ್ಥಿಗಳು ನಿಲಯದ ಸೌಕರ್ಯ ದಿಂದ ವಂಚಿತರಾಗಬೇಕಾಗಿದೆ.

ನಲ್ಲಚೆರುವು ಪ್ರದೇಶದಲ್ಲೇ ಇರುವ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಕಾಲೇಜಿನ ಸಮೀಪದಲ್ಲೇ ವಿದ್ಯಾರ್ಥಿ ನಿಲಯವನ್ನು ನಿರ್ಮಿಸ ಲಾಗಿದೆ. ನಿಲಯಕ್ಕೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು 50 ಮಂಚಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಪೂರೈಸಿದೆ. ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಲು ₹10 ಲಕ್ಷ ಬಿಡುಗಡೆ ಯಾಗಿದೆ.

ಅಡುಗೆ ಸಾಮಗ್ರಿಯೂ ಪೂರೈಕೆಯಾಗಿದೆ. ಆದರೆ ನಿಲಯ ಹಸ್ತಾಂತರಗೊಳ್ಳದೇ ಇರುವುದರಿಂದ ಅವೆಲ್ಲವೂ ನಿರುಪಯುಕ್ತವಾಗಿವೆ.

ನೀರಿಲ್ಲದೇ ನಿರ್ಮಾಣ: ಕಟ್ಟಡವನ್ನು ನಿರ್ಮಿಸುವ ಮುನ್ನ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮವು ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿರಲಿಲ್ಲ. ಕಾಲೇಜಿನ ಕೊಳವೆಬಾವಿಯ ನೀರು ಕಟ್ಟಡ ನಿರ್ಮಾಣಕ್ಕೆ ಯೋಗ್ಯವಲ್ಲ ಎಂಬ ವರದಿ ಇದ್ದರೂ ಅದನ್ನೇ ಬಳಸಿ ನಿರ್ಮಿಸಿದೆ ಎಂದು ಪ್ರಾಂಶುಪಾಲ ಡಿ.ಗಂಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಲೇಜಿನ ಕೊಳವೆಬಾವಿಯ ನೀರನ್ನೇ ಬಳಸಿದ್ದರಿಂದ ವಿದ್ಯುತ್‌ ಬಿಲ್‌ ಮೊತ್ತ ₹30,000 ಸಾವಿರ ವಾಗಿತ್ತು. ಅದನ್ನು ಪಾವತಿ ಮಾಡದೇ ಇದ್ದುದ ರಿಂದ ಕಾಲೇಜಿಗೆ ವಿದ್ಯುತ್‌ ಸಂಪರ್ಕ ವನ್ನು ಕಡಿತಗೊಳಿಸಲಾಗಿತ್ತು. ನಂತರ ₹20,000 ಅನ್ನು ಕಾಲೇಜಿನ ವತಿ ಯಿಂದಲೇ ಪಾವತಿ ಮಾಡ ಲಾಯಿತು’ ಎಂದರು.

‘ನಿಲಯ ಸಂಪೂರ್ಣವಾಗಿ ನಿರ್ಮಾಣವಾಗಿದ್ದರೂ ನಿಗಮವು ಅಲ್ಲಿ ನೀರಿನ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ. ಕ್ರಿಯೋಯೋಜನೆಯಲ್ಲಿ ನೀರಿನ ವ್ಯವಸ್ಥೆಗೂ ಹಣ ನಿಗದಿಯಾಗಿದೆ. ಹೀಗಾಗಿ ವ್ಯವಸ್ಥೆ ಮಾಡಿ ಕೊಡಿ ಎಂದು ನಿಗಮಕ್ಕೆ ಹೇಳಲಾಗಿತ್ತು. ಒಮ್ಮೆ ಕೊರೆಸಿದ ಕೊಳವೆ ಬಾವಿ ವಿಫಲವಾದ ಬಳಿಕ ನಿಗಮ ಮತ್ತೆ ಯಾವ ಪ್ರಯತ್ನವನ್ನೂ ಮಾಡದೇ ಸುಮ್ಮನಾಗಿದೆ’ ಎಂದು ದೂರಿದರು.

‘ಈ ವರ್ಷವಾದರೂ ನಿಲಯ ವನ್ನು ಹಸ್ತಾಂತರಿಸಬಹುದು ಎಂದು ನಿರೀಕ್ಷಿಸ ಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ. ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದೆ’ ಎಂದರು.

* * 

ನಿಲಯವನ್ನು ಹಸ್ತಾಂತರಿಸದೇ ಇರುವ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಅವರ ಸೂಚನೆ ಬಳಿಕವೂ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ

ಪ್ರೊ.ಡಿ.ಗಂಗಣ್ಣ, ಪ್ರಾಂಶುಪಾಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry