ಬಿಹಾರದ ರಾಜ್ಯಪಾಲ, ದಲಿತ ನಾಯಕ ರಾಮನಾಥ್‌ ಕೋವಿಂದ್‌‌ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ

7
ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಘೋಷಣೆ

ಬಿಹಾರದ ರಾಜ್ಯಪಾಲ, ದಲಿತ ನಾಯಕ ರಾಮನಾಥ್‌ ಕೋವಿಂದ್‌‌ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ

Published:
Updated:
ಬಿಹಾರದ ರಾಜ್ಯಪಾಲ, ದಲಿತ ನಾಯಕ ರಾಮನಾಥ್‌ ಕೋವಿಂದ್‌‌ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ

ನವದೆಹಲಿ: ಬಿಹಾರದ ರಾಜ್ಯಪಾಲ ಹಾಗೂ ದಲಿತ ನಾಯಕ ರಾಮನಾಥ್‌ ಕೋವಿಂದ್‌ ಅವರನ್ನು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ನವದೆಹಲಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಧ್ಯಕ್ಷ ‌ಅಮಿತ್‌ ಷಾ, ಕೋವಿಂದ್‌ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿದರು.

ಕೋವಿಂದ್‌ ಅವರು ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು 1999 ಮತ್ತು 2002ರ ಅವಧಿಯಲ್ಲಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷದ ರಾಷ್ಟ್ರೀಯ ವಕ್ತಾರರಾಗಿಯೂ ಅವರು ಕೆಲಸ ಮಾಡಿದ್ದರು.

ಕೋಲಿ ಸಮುದಾಯಕ್ಕೆ ಸೇರಿದ ಕೋವಿಂದ್‌ ಅವರು ಉತ್ತರ ಪ್ರದೇಶದ ಕಾನ್ಪುರ್‌ ದೇಹಾತ್‌ನಲ್ಲಿ 1945ರ ಅಕ್ಟೋಬರ್‌ 1ರಂದು ಜನಿಸಿದರು. ಕೋವಿಂದ್‌ ಅವರು ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry