ಹಾಕಿ: ಪಾಕಿಸ್ತಾನವನ್ನು 6-1 ಗೋಲುಗಳಿಂದ ಪರಾಭವಗೊಳಿಸಿದ ಭಾರತ

7

ಹಾಕಿ: ಪಾಕಿಸ್ತಾನವನ್ನು 6-1 ಗೋಲುಗಳಿಂದ ಪರಾಭವಗೊಳಿಸಿದ ಭಾರತ

Published:
Updated:
ಹಾಕಿ: ಪಾಕಿಸ್ತಾನವನ್ನು 6-1 ಗೋಲುಗಳಿಂದ ಪರಾಭವಗೊಳಿಸಿದ ಭಾರತ

ಲಂಡನ್‌: ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ನ ಐದರಿಂದ ಎಂಟರವರೆಗಿನ ಸ್ಥಾನಕ್ಕಾಗಿ ತಂಡಗಳನ್ನು ವಿಂಗಡಿಸುವ ಪಂದ್ಯದಲ್ಲಿ ಶನಿವಾರ ಭಾರತ ತಂಡ ಪಾಕಿಸ್ತಾನವನ್ನು  6-1 ಗೋಲುಗಳ ಅಂತರದಿಂದ ಪರಾಭವಗೊಳಿಸಿದೆ.

ಭಾರತದ ಪರವಾಗಿ ರಣದೀಪ್ ಸಿಂಗ್, ಮನ್‍ದೀಪ್ ಸಿಂಗ್  ತಲಾ ಎರಡು ಗೋಲು ಬಾರಿಸಿದ್ದು, ಹರ್ಮನ್ ಪ್ರೀತ್ ಮತ್ತು ತಲ್ವಿಂದರ್ ಸಿಂಗ್ ತಲಾ ಒಂದು ಗೋಲು ಬಾರಿಸಿದ್ದಾರೆ.

ಪಾಕಿಸ್ತಾನದ ಪರವಾಗಿ ಅಜಾಜ್ ಅಹ್ಮದ್ ಅವರು ಒಂದು ಗೋಲು ಬಾರಿಸಿದ್ದಾರೆ.

ಕಳೆದ ಭಾನುವಾರ ನಡೆದಿದ್ದ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ 7–1ರಿಂದ ಪರಾಭವಗೊಳಿಸಿತ್ತು.  5 ಮತ್ತು 6 ನೇ ಸ್ಥಾನಕ್ಕಾಗಿರುವ ಪಂದ್ಯದಲ್ಲಿ ಭಾನುವಾರ ಭಾರತ ಮತ್ತು ಕೆನಡಾ ನಡುವೆ ಹಣಾಹಣಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry