ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರಿನಲ್ಲಿ 25 ಸೆಂ.ಮೀ.ಮಳೆ

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ರಾಜ್ಯದ ಒಳನಾಡಿನ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಕೊಲ್ಲೂರಿನಲ್ಲಿ 25 ಸೆಂ.ಮೀ, ಗೇರುಸೊಪ್ಪದಲ್ಲಿ 13, ಸಿದ್ದಾಪುರದಲ್ಲಿ 10, ಮಂಕಿ, ಯಲ್ಲಾಪುರದಲ್ಲಿ ತಲಾ 9, ಶಿರಾಲಿ, ಸಿದ್ದಾಪುರ, ತಾಳಗುಪ್ಪದಲ್ಲಿ 7 ಸೆಂ.ಮೀ. ಮಳೆಯಾಗಿದೆ.

ಕೋಟ, ಕಾರ್ಕಳ, ಕದ್ರಾ, ಆಗುಂಬೆಯಲ್ಲಿ ತಲಾ 6, ಹೊನ್ನಾವರ, ಕುಮಟಾ, ತ್ಯಾಗರ್ತಿ, ಶಿಕಾರಿಪುರ, ಕಮ್ಮರಡಿಯಲ್ಲಿ ತಲಾ 5, ಸುಳ್ಯ, ಅಂಕೋಲಾ, ಬನವಾಸಿ, ಹುಂಚದಕಟ್ಟೆ ಯಲ್ಲಿ 4, ಮಂಚಿಕೇರಿ, ಜಗಲ್‌ಬೇಟ್, ಮುಂಡಗೋಡ, ಲೋಂಡಾ, ಭಾಗಮಂಡಲದಲ್ಲಿ ತಲಾ 3, ಮಂಗಳೂರು, ಮೂಡುಬಿದಿರೆ, ಧರ್ಮಸ್ಥಳ, ಕಾರವಾರ, ಹೊನ್ನಾಳಿಯಲ್ಲಿ ತಲಾ 2, ಪಣಂಬೂರು, ಬಂಟ್ವಾಳ, ಪುತ್ತೂರು, ಕಿರವಟ್ಟಿ, ಹಳಿಯಾಳ, ಶಿಗ್ಗಾಂವಿ, ಹಿರೇಕೆರೂರು, ಸವಣೂರು, ಶಿವಮೊಗ್ಗ, ಮೈಸೂರಿನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT