ಬುಧವಾರ, ಫೆಬ್ರವರಿ 19, 2020
24 °C

ಆಟದ ಬೊಂಬೆಯಲ್ಲ ಕೇಕ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟದ ಬೊಂಬೆಯಲ್ಲ ಕೇಕ್!

ಕೇಕ್‌ನಲ್ಲಿ ಮಕ್ಕಳ ನೆಜ್ಜಿನ ಗೊಂಬೆಗಳನ್ನು ಮೂಡಿಸಿದರೆ ಹೇಗಿರುತ್ತೆ? ಅಂಥದ್ದೊಂದು ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಸಿಂಗಪುರದ ಬೇಕರಿ ತಜ್ಞೆ ಸೂಸನ್ ಎನ್‌ಜಿ.

ಹೌದು ಸೂಸನ್ ಮಾಡುವ ಗೊಂಬೆ ಕೇಕ್‌ಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಕೇಕ್‌ಗಳನ್ನು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುವ ಭೀತಿ ಇರದು. ಮಾಮೂಲಿ ಕೇಕ್‌ಗಿಂತ ಸೂಸನ್ ಭಿನ್ನವಾಗಿ ಕೇಕ್‌ಗಳನ್ನು ತಯಾರಿಸುತ್ತಾರೆ. ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಮೈದಾ ಹಿಟ್ಟನ್ನು ಬಳಸಿ ಮಾಡುವುದರಿಂದ ಮಕ್ಕಳು ಸೇರಿದಂತೆ ಹಿರಿಯರೂ ಈ ಕೇಕ್‌ಗಳನ್ನು ಖುಷಿಖುಷಿಯಾಗಿ ತಿನ್ನಬಹುದು.

ಇಂಥ ಕೇಕ್‌ಗಳನ್ನು ಮಾಡುವ ಕಲೆ ಎಲ್ಲರಿಗೂ ತಿಳಿಯಲಿ ಎಂಬ ಆಶಯದಿಂದ ಸೂಸನ್ ‘ಕ್ರಿಯೇಟಿವ್ ಬೇಕಿಂಗ್: ಶಿಫಾನ್ ಕೇಕ್ಸ್’ ಎನ್ನುವ ಪುಸ್ತಕವನ್ನೂ ಬರೆದಿದ್ದಾರೆ.

ಅಷ್ಟೇ ಅಲ್ಲ ಕೇಕ್ ತಯಾರಿಸುವ ವಿಧಾನಗಳನ್ನು Loving Creations for You ಎಂಬ ಹೆಸರಿನ ಬ್ಲಾಗಿನಲ್ಲೂ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)