ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲ ಮನ್ನಾಕ್ಕೆ ಆಗ್ರಹ

Last Updated 4 ಜುಲೈ 2017, 5:47 IST
ಅಕ್ಷರ ಗಾತ್ರ

ಹಾವೇರಿ: ‘ರಾಷ್ಟ್ರೀಕೃತ, ಸಹಕಾರಿ ಸಂಘ ಹಾಗೂ ಪಿ.ಎಲ್‌.ಡಿ. ಬ್ಯಾಂಕ್‌ಗಲ್ಲಿನ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತ ನಾಡಿ, ‘ರೈತರಿಗೆ ನೀಡಬೇಕಾದ ಬೆಳೆ ವಿಮೆ ಬಾಕಿ ಹಾಗೂ ಬೆಳೆ ಪರಿಹಾರವನ್ನು ಶೀಘ್ರವೇ ನೀಡಬೇಕು. ಎಲ್ಲ ರಾಷ್ಟ್ರೀಕೃತ, ಸಹಕಾರಿ ಸಂಘ ಹಾಗೂ ಪಿ.ಎಲ್‌.ಡಿ ಬ್ಯಾಂಕ್‌ಗಲ್ಲಿನ ರೈತರ ಸಂಪೂರ್ಣ ಸಾಲ ವನ್ನು ಮನ್ನಾ ಮಾಡಬೇಕು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಕಾರಿ ಸಂಘಗಳಲ್ಲಿನ ಕೇವಲ ₹ 50 ಸಾವಿರ ಸಾಲವನ್ನು ಮನ್ನಾ ಮಾಡಿದ್ದು, ನಾವು ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ ಎಂದು ಬೀಗುತ್ತಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು, ‘ನಾನೇ ಸಹಕಾರಿ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಿಸಿದ್ದೇನೆ’ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿ ದ್ದಾರೆ’ ಎಂದು ಲೇವಡಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಜಿಲ್ಲೆಯ ನದಿಗಳಲ್ಲಿ ನೀರು ಬಂದಿದ್ದು, ಎಲ್ಲ ಕೆರೆಗಳನ್ನು ತಕ್ಷಣದಿಂದಲೇ ತುಂಬಿಸಬೇಕು. ಅಧಿಕಾರಿಗಳು ತಂತ್ರಜ್ಞಾನದ ಕುಂಟು ನೆಪ ನೀಡಿ ರೈತರ ಪರಿಹಾರದ ಹಣ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ’ ಎಂದರು.

‘2015–16ನೇ ಸಾಲಿನ ಬೆಳೆ ವಿಮೆ ಹಾಗೂ ಪರಿಹಾರ ನೀಡುವಲ್ಲಿನ ತಾರ ತಮ್ಯ ಸರಿಪಡಿಸಿ, 2016–17ನೇ ಸಾಲಿನ ಬೆಳೆವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಲಿನ ಸಹಾಯಧನ ವನ್ನು ಆರು ತಿಂಗಳನಿಂದ ನೀಡಿಲ್ಲ. ಹೈನುಗಾರಿಕೆ ಮಾಡುತ್ತಿರುವ ಕುಟುಂಬ ಗಳು ಸಂಕಷ್ಟದಲ್ಲಿವೆ’ ಎಂದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಬಸಪ್ಪ ಗೋವಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಸಂಚಾಲಕ ಮಹ್ಮದ್‌ ಗೌಸ್‌ ಪಾಟೀಲ, ಮುಖಂಡರಾದ ಸುರೇಶ ಚಲವಾದಿ, ಡಿಳ್ಳೆಪ್ಪ ಮಣ್ಣೂರ, ಮರಿಗೌಡ ಪಾಟೀಲ, ಕರಬಸಪ್ಪ ಅಗಸಿಬಾಗಿಲ, ಬಸವನಗೌಡ ಗಂಗಪ್ಪನವರ, ರುದ್ರಗೌಡ ಕಾಡನಗೌಡ, ಹೇಮಣ್ಣ ಕೋಡಿಹಳ್ಳಿ ಹಾಗೂ ಮಂಜುನಾಥ ಕದಂ ಇದ್ದರು.

ಬಂಧನಕ್ಕೆ ಖಂಡನೆ
‘ರೈತರು ಅರಣ್ಯವನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ದಲ್ಲಿ ಹೇಳಿದ್ದರು. ಆದರೆ ಜಿಲ್ಲೆಯ ರಟ್ಟೀಹಳ್ಳಿ ಸಮೀಪದ ಕಮಲಾ ಪುರ ಗ್ರಾಮದ ಅರಣ್ಯದಲ್ಲಿ 1990ರಿಂದಲೂ ಸಾಗುವಳಿ ಮಾಡುತ್ತಾ ಬಂದ ರೈತರಿಗೆ ‘ಹಕ್ಕುಪತ್ರ’ ನೀಡದೇ ಬಂಧಿಸಿ ರುವುದು ಖಂಡನೀಯ’ ಎಂದು ರಾಮಣ್ಣ ಕೆಂಚಳ್ಳೇರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT