ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಇಂದು ರಾಷ್ಟ್ರಪತಿ ಪ್ರಣವ್‌

Last Updated 4 ಜುಲೈ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು:  ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಭಾಗವಹಿಸಲು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಬುಧವಾರ ನಗರಕ್ಕೆ ಆಗಮಿಸಲಿದ್ದಾರೆ.

ಜೆ.ಎನ್‌.ಟಾಟಾ ಸಭಾಂಗಣದಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯುವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದ 52 ವಿದ್ಯಾರ್ಥಿಗಳಿಗೆ  ಪದಕಗಳನ್ನು ಪ್ರದಾನ ಮಾಡಲಾಗುವುದು. ಅಲ್ಲದೆ, ಎಂ.ಇ, ಎಂ.ಟೆಕ್‌, ಎಂ.ಎಸ್‌, ಪಿಎಚ್‌.ಡಿ, ಎಂ.ಎಸ್‌ಸಿ ಮತ್ತು ಪದವಿಯ 625 ವಿದ್ಯಾರ್ಥಿಗಳು ಭಾಗವಹಿಸುವರು ಎಂದು  ಐಐಎಸ್‌ಸಿ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್‌ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರು.

***

ನಗರಕ್ಕೆ ರಾಷ್ಟ್ರಪತಿ ಭೇಟಿ ವಾಹನ ನಿಲುಗಡೆ ನಿಷೇಧ

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಬುಧವಾರ ನಗರಕ್ಕೆ ಬರುತ್ತಿದ್ದು, ಅವರು ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಮಧ್ಯಾಹ್ನ 12 ರಿಂದ 2 ಹಾಗೂ 2 ರಿಂದ 3.30ರ ವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಇಸ್ರೊ ಜಂಕ್ಷನ್, ಮಣಿಪಾಲ್ ಆಸ್ಪತ್ರೆ ಜಂಕ್ಷನ್, ಇಂದಿರಾನಗರ 100 ಅಡಿ ರಸ್ತೆ, ದೊಮ್ಮಲೂರು, ಸಿ.ಬಿ. ರಸ್ತೆ ಜಂಕ್ಷನ್, ಎ.ಎಸ್‌.ಸಿ ಕೇಂದ್ರ, ಟ್ರಿನಿಟಿ ಚರ್ಚ್ ವೃತ್ತ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ಕೆ.ಆರ್.ರಸ್ತೆ ಜಂಕ್ಷನ್, ಬಿಆರ್‌ವಿ ಜಂಕ್ಷನ್, ರಾಜಭವನ ರಸ್ತೆ, ಪೊಲೀಸ್ ತಿಮ್ಮಯ್ಯ ವೃತ್ತ, ಬಸವೇಶ್ವರ ವೃತ್ತ, ಹಳೆ ಹೈಗ್ರೌಂಡ್ಸ್ ಠಾಣೆ ಜಂಕ್ಷನ್, ಟಿ.ಚೌಡಯ್ಯ   ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಪಿ.ಜಿ.ಹಳ್ಳಿ, ಕಾವೇರಿ
ಜಂಕ್ಷನ್, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ ಸರ್ವಿಸ್ ರಸ್ತೆ, ಸಿ.ವಿ.ರಾಮನ್ ರಸ್ತೆ, ಸದಾಶಿವನಗರ ಠಾಣೆ ಜಂಕ್ಷನ್, ಬಿ.ಎಚ್‌.ಇ.ಎಲ್. ಸರ್ವಿಸ್ ರಸ್ತೆ, ಮಾರಮ್ಮ ದೇವಸ್ಥಾನ ವೃತ್ತ ಹಾಗೂ ಜೆ.ಎನ್.ಟಾಟಾ ಸಭಾಂಗಣ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT