ಭಾನುವಾರ, ಡಿಸೆಂಬರ್ 8, 2019
21 °C

ಹವಳ ಮಾತನಾಡುತ್ತೆ, ಗಂಡಸರು ಸಾಯ್ತಾರಂತೆ; ವದಂತಿಗೆ ಕಿವಿಗೊಟ್ಟ ಮಹಿಳೆಯರು ತಾಳಿ ತೆಗೆದು ಹವಳ ಜಜ್ಜಿದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹವಳ ಮಾತನಾಡುತ್ತೆ, ಗಂಡಸರು ಸಾಯ್ತಾರಂತೆ; ವದಂತಿಗೆ ಕಿವಿಗೊಟ್ಟ ಮಹಿಳೆಯರು ತಾಳಿ ತೆಗೆದು ಹವಳ ಜಜ್ಜಿದರು!

ಚಿತ್ರದುರ್ಗ: ‘ಹವಳ ಮಾತನಾಡುತ್ತೆ, ಗಂಡಸರು ಸಾಯ್ತಾರಂತೆ’ ಎಂಬ ವದಂತಿ ನಂಬಿದ ಮಹಿಳೆಯರು ತಾಳಿಯ ಜತೆಗಿದ್ದ ಹವಳಗಳನ್ನು ಒಡೆದು ಹಾಕಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಬಳ್ಳಾರಿ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿರುವ ತಮ್ಮ ಸಂಬಂಧಕರಿಂದ  ಕೇಳಿ ಬಂದ ಫೋನ್ ಕರೆಗಳಿಂದ ಮೊಳಕಾಲ್ಮುರು ಗಡಿಭಾಗದ ಹಳ್ಳಿಗಳ ಮಹಿಳೆಯರು ಗಾಬರಿಗೊಂಡು ಹೀಗೆ ಮಾಡಿದ್ದಾರೆಂದು ಸ್ಥಳೀಯರು ಪ್ರಜಾವಾಣಿಗೆ ತಿಳಿಸಿದ್ದಾರೆ.

ಪತಿಯ ಜೀವಕ್ಕೆ ಕುತ್ತು ಬರುತ್ತದೆ ಎಂಬ ವದಂತಿಯನ್ನು ನಂಬಿದ  ಗೃಹಿಣಿಯರು ತಾಳಿಯ ಜೊತೆಯಿದ್ದ ಹವಳಗಳನ್ನು ಒಡೆದಿರುವ ಘಟನೆ ಬಳ್ಳಾರಿಯ ಕೂಡ್ಲಿಗಿಯಲ್ಲಿಯೂ ನಡೆದಿರುವುದು ವರದಿಯಾಗಿದೆ.

ಕೆಂಪು ಹವಳಕ್ಕೆ ಜೀವ ಬರುತ್ತದೆ, ಅದು ಮಾತನಾಡಿದರೆ ಪತಿ ಸಾವಿಗೀಡಾಗುತ್ತಾರೆ ಎಂಬ ವದಂತಿ ಹರಡಿದೆ.

ಪ್ರತಿಕ್ರಿಯಿಸಿ (+)