ಶನಿವಾರ, ಡಿಸೆಂಬರ್ 7, 2019
25 °C

ಶ್ರೀನಗರ ಕಿಟ್ಟಿ ಈಗ ಖಡಕ್ ಪೊಲೀಸ್ ಅಧಿಕಾರಿ

Published:
Updated:
ಶ್ರೀನಗರ ಕಿಟ್ಟಿ ಈಗ ಖಡಕ್ ಪೊಲೀಸ್ ಅಧಿಕಾರಿ

ನಟ ಶ್ರೀನಗರ ಕಿಟ್ಟಿ ಈಗ ಖಡಕ್ ಪೊಲೀಸ್ ಅಧಿಕಾರಿ. ನಿಜ, 'ಗರುಡ' ಸಿನಿಮಾದಲ್ಲಿ ಕಿಟ್ಟಿ ಖಾಕಿ ಖದರ್‌ ಸಖತ್ತಾಗಿದೆ. ಚಂದನವನದ ಕೊರಿಯೊಗ್ರಾಫರ್ ಧನಕುಮಾರ್ ನಿರ್ದೇಶಿಸುತ್ತಿರುವ 'ಗರುಡ' ಸಿನಿಮಾದಲ್ಲಿ ಕಿಟ್ಟಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಖಾಕಿ ಪ್ಯಾಂಟ್, ನೀಲಿ ಶರ್ಟ್ ತೊಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಹುರಿಗೊಳಿಸಿದ ಮೀಸೆ ತಿರುವುತ್ತಿರುವ ಕಿಟ್ಟಿ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿವೆ. ಇದುವರೆಗೆ ಲವರ್ ಬಾಯ್, ಭಾವುಕ ನಾಯಕನಾಗಿ ಕಿಟ್ಟಿ ಕಾಣಿಸಿಕೊಂಡಿದ್ದರು. ಈಗ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎನ್ನುತ್ತಾರೆ 'ಗರುಡ' ಚಿತ್ರದ ಮತ್ತೊಬ್ಬ ನಾಯಕ ಸಿದ್ದಾರ್ಥ್ ಮಹೇಶ್.

ಸಿದ್ದಾರ್ಥ್ ಈ ಹಿಂದೆ 'ಸಿಪಾಯಿ' ಎನ್ನುವ ಸಿನಿಮಾ ನಿರ್ದೇಶಿಸಿದ್ದರು. ಈಗ ಕಿಟ್ಟಿ ಜತೆಗೆ ನಾಯಕನಾಗಿ 'ಗರುಡ'ದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಐಂದ್ರಿತಾ ರೇ, ಆಶಿಕಾ ರಂಗನಾಥ್ ಇಬ್ಬರು ನಾಯಕಿಯರು ಈ ಸಿನಿಮಾದಲ್ಲಿದ್ದು, ಕಿಟ್ಟಿಗೆ ಇನ್ನೂ ನಾಯಕಿ ಸಿಕ್ಕಿಲ್ಲವಂತೆ. ಪ್ರಸಾದ ರೆಡ್ಡಿ ಸಿನಿಮಾ ನಿರ್ಮಿಸುತ್ತಿದ್ದು, ರಘು ದೀಕ್ಷಿತ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ತಾರಾಗಣದಲ್ಲಿ ರಂಗಾಯಣ ರಘು, ಆದಿಲೋಕೇಶ್ ಮತ್ತಿತರರು ಇದ್ದಾರೆ. ಕಿಟ್ಟಿಯ ಹೊಸ ಗೆಟಪ್‌ಅನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು. 

ಪ್ರತಿಕ್ರಿಯಿಸಿ (+)