ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಮಾರಾಟ ಜಾಹೀರಾತು ಪ್ರಕಟಿಸಿ ವಂಚನೆ: ಇಬ್ಬರ ಸೆರೆ

Last Updated 5 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಓಎಲ್‌ಎಕ್ಸ್‌ ಜಾಲತಾಣದಲ್ಲಿ ಕಾರು ಮಾರಾಟದ ಜಾಹೀರಾತು ಪ್ರಕಟಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ನೈಜೀರಿಯಾದ ಆಗಸ್ಟಿನ್‌ ಆನ್‌ಯೆಮಾ ಹೊಜೊ (42) ಎಂಬಾತನನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಯು ಬಿದರಹಳ್ಳಿಯಲ್ಲಿ ವಾಸವಿದ್ದ. ಆತನಿಂದ ಬೈಕ್, 5 ಮೊಬೈಲ್‌ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

‘ಓಎಲ್‌ಎಕ್ಸ್‌ ಜಾಲತಾಣದಲ್ಲಿ ಖಾತೆ ತೆರೆದಿದ್ದ ಆರೋಪಿ ಸ್ವಿಫ್ಟ್‌ ಕಾರು ಮಾರಾಟಕ್ಕಿದೆ ಎಂದು ಚಿತ್ರ ಸಮೇತ ಜಾಹೀರಾತು ಪ್ರಕಟಿಸಿದ್ದ. ನಕಲಿ  ಸಿಮ್‌ಕಾರ್ಡ್‌ ನಂಬರ್‌ ಸಹ ಅದರಲ್ಲಿ ನಮೂದಿಸಿದ್ದ’.

‘ಅದನ್ನು ನೋಡಿದ ಸಾರ್ವಜನಿಕರು ಆತನ್ನು ಸಂಪರ್ಕಿಸಿ ಕಾರು ಖರೀದಿಗೆ ಮಾತುಕತೆ ನಡೆಸುತ್ತಿದ್ದರು. ಕಡಿಮೆ ದರಕ್ಕೆ ಕಾರು ಮಾರಾಟ ಮಾಡುವುದಾಗಿ ಹೇಳುತ್ತಿದ್ದ ಆರೋಪಿಯು ಬ್ಯಾಂಕ್‌ ಖಾತೆಗೆ ಮುಂಗಡವಾಗಿ ಹಣ ಜಮೆ ಮಾಡಿಸಿಕೊಳ್ಳುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ತಾನು ವಿದೇಶದಲ್ಲಿದ್ದು, ಬೆಂಗಳೂರಿಗೆ ಬಂದ ಕೂಡಲೇ ಕಾರು ಕೊಡುವುದಾಗಿ ಹೇಳುತ್ತಿದ್ದ. ಬಳಿಕ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ’ ಎಂದು ವಿವರಿಸಿದರು.

‘ಇದೇ ರೀತಿ ಆತ ಐವರು ಗ್ರಾಹಕರಿಂದ ಮುಂಗಡ ಹಣ ಪಡೆದು ವಂಚಿಸಿದ್ದಾನೆ. ಈ ಬಗ್ಗೆ ದಾಖಲಾಗಿದ್ದ ದೂರಿನನ್ವಯ ಆತನನ್ನು ಬಂಧಿಸಿದ್ದೇವೆ’ ಎಂದು ವಿವರಿಸಿದರು.

ಸಿಮ್‌ ಕಾರ್ಡ್‌ ಮಾರಿದ್ದವನ ಬಂಧನ: ಆರೋಪಿಯಿಂದ ಯಾವುದೇ ದಾಖಲೆ ಪಡೆಯದೆ ಆತನಿಗೆ ಸಿಮ್‌ ಕಾರ್ಡ್‌ ಮಾರಾಟ ಮಾಡಿದ್ದ ಆರೋಪದಡಿ ಕೆ.ಆರ್‌.ಪುರದ ಮಾರ್ಗೋಂಡನ ಹಳ್ಳಿಯ ಜಗದೀಶ್‌ಕುಮಾರ್‌ ಎಂಬಾತನನ್ನು ಸೈಬರ್‌ ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್‌ ಅಂಗಡಿ ಇಟ್ಟುಕೊಂಡಿರುವ ಜಗದೀಶ್‌, ತನ್ನ ಬಳಿ ಸಿಮ್‌ ಖರೀದಿ ಮಾಡುತ್ತಿದ್ದ ಸಾರ್ವಜನಿಕರ ದಾಖಲೆಗಳನ್ನು ಜೆರಾಕ್ಸ್‌ ಮಾಡಿಟ್ಟುಕೊಳ್ಳುತ್ತಿದ್ದ. ಅವುಗಳ ಮೂಲಕ ಅಕ್ರಮವಾಗಿ ಸಿಮ್‌ ಖರೀದಿಸಿ  ಆಕ್ಟಿವೇಷನ್‌ ಮಾಡಿಸುತ್ತಿದ್ದ. ಅದೇ ಸಿಮ್‌ ಕಾರ್ಡ್‌ಗಳನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

‘ನೈಜೀರಿಯಾ ಪ್ರಜೆಗೂ ಜಗದೀಶ್‌, ಅಂಥದ್ದೇ 10ಕ್ಕೂ ಹೆಚ್ಚು ಸಿಮ್‌ ಕಾರ್ಡ್‌  ಮಾರಾಟ ಮಾಡಿದ್ದ. ಅವುಗಳನ್ನೇ ಬಳಸಿ ಆರೋಪಿ ಕೃತ್ಯ ಎಸಗುತ್ತಿದ್ದ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT