ಸೋಮವಾರ, ಡಿಸೆಂಬರ್ 16, 2019
24 °C

ವಿರಾಟ್‌ ಶತಕದ ಸಂಭ್ರಮ: ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಸರಣಿ ಜಯಿಸಿದ ಟೀಂ ಇಂಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಟ್‌ ಶತಕದ ಸಂಭ್ರಮ: ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಸರಣಿ ಜಯಿಸಿದ ಟೀಂ ಇಂಡಿಯಾ

ಕಿಂಗ್ಸ್‌ಟನ್‌, ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಗುರುವಾರ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 8 ವಿಕೆಟ್‌ ಜಯ ಸಾಧಿಸಿದೆ.

ಸರಣಿಯಲ್ಲಿ 3–1ರಿಂದ ಮುನ್ನಡೆ ಸಾಧಿಸುವ ಮೂಲಕ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯನ್ನು ಭಾರತ ವಶಪಡಿಸಿಕೊಂಡಿತ್ತು.

ಸರಣಿಯ 5ನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ವೆಸ್ಟ್‌ ಇಂಡೀಸ್‌ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು.(ಮೊಹಮ್ಮದ್‌ ಶಮಿ 4, ಉಮೇಶ್‌ ಯಾದವ್‌ 3, ಹಾರ್ದಿಕ್‌ ಪಾಂಡ್ಯ 1, ಕೇದಾರ್‌ ಜಾದವ್‌ 1 ವಿಕೆಟ್)

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ 36.5 ಓವರ್‌ಗಳಲ್ಲಿ  2 ವಿಕೆಟ್‌ ನಷ್ಟಕ್ಕೆ 206 ರನ್‌ ಗಳಿಸಿ, ವೆಸ್ಟ್‌ ಇಂಡೀಸ್‌ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿತ್ತು.

ಭಾರತ ಪರ: ರಹಾನೆ 39, ಶಿಖರ್‌ ಧವನ್‌ 4, ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ 111, ದಿನೇಶ್‌ ಕಾರ್ತಿಕ್‌ ಬ್ಯಾಟಿಂಗ್‌ 50 ರನ್‌ ಗಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)