ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸ್ಯಾನಿಟರಿ ಪ್ಯಾಡ್‍ಗಳು ಬೇಕಿಲ್ಲ' ಎಂದು ಹೇಳಿರುವ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ವಿರುದ್ಧ ನೆಟಿಜನ್‍ಗಳ ಆಕ್ರೋಶ

Last Updated 8 ಜುಲೈ 2017, 15:19 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾನಿಟರಿ ಪ್ಯಾಡ್‍ಗಳ ಮೇಲೆ ಶೇ.12ರಷ್ಟು ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರು ನಾಲ್ಕೈದು ದಿನಗಳ ಹಿಂದೆಯಷ್ಟೇ ‘ಡು ನಾಟ್‌ ಟ್ಯಾಕ್ಸ್‌ ಮೈ ಪೀರಿಯಡ್ಸ್‌’ (ನನ್ನ ಋತುಸ್ರಾವಕ್ಕೆ ತೆರಿಗೆ ಹಾಕಬೇಡಿ)ಎಂದು ಅಭಿಯಾನ ಆರಂಭಿಸಿದ್ದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಲ್ಲಿ ಸ್ಯಾನಿಟರಿ ಪ್ಯಾಡ್‌ ಅನ್ನು ಐಷಾರಾಮಿ ವಸ್ತುವೆಂದು ಪರಿಗಣಿಸಿ ಅದಕ್ಕೆ ಶೇ 12ರಷ್ಟು ತೆರಿಗೆ ವಿಧಿಸಿರುವುದೇ ಈ ಆಕ್ರೋಶಕ್ಕೆ ಕಾರಣ. ‘ಸ್ಯಾನಿಟರಿ ಪ್ಯಾಡ್‌, ಮಹಿಳೆಯರನ್ನು ಶುಚಿಯಾಗಿಡುವ ವಸ್ತುವೇ ವಿನಾ ಐಷಾರಾಮಿ ವಸ್ತುವಲ್ಲ’ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಅಭಿಯಾನ ಇದಾಗಿದೆ. ಕುಂಕುಮ, ಬಳೆ ಇತ್ಯಾದಿಗಳನ್ನು ತೆರಿಗೆಯಿಂದ ಮುಕ್ತಮಾಡಿ ಸ್ಯಾನಿಟರಿ ಪ್ಯಾಡ್‌ಗೆ ದುಪ್ಪಟ್ಟು ಹಣ ವಸೂಲು ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಮಹಿಳೆಯರು ಕಿಡಿಕಾರುತ್ತಿದ್ದು, ಈ ಅಭಿಯಾನಕ್ಕೆ ಹಲವಾರು ಪುರುಷರೂ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದೆಲ್ಲದರ ನಡುವೆಯೇ ಬಿಜೆಪಿ ವಕ್ತಾರೆ, ನಟಿ ಮಾಳವಿಕಾ ಅವಿನಾಶ್ ಅವರು ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‍ಗಳು ಅಗತ್ಯವಿಲ್ಲ ಎಂದು ಹೇಳಿರುವುದರ ವಿರುದ್ಧ ಸಾಮಾಜಿಕ ತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

[related]

ಮಾಳವಿಕಾ ಹೇಳಿದ್ದೇನು ?
ಶನಿವಾರ ಪ್ರಜಾವಾಣಿ ಭೂಮಿಕಾ ಪುರವಣಿಯಲ್ಲಿ ಪ್ರಕಟವಾದ 'ರಕ್ತದ ಮೇಲೆ ತೆರಿಗೆ!' ಎಂಬ ಲೇಖನದಲ್ಲಿ ಮಾಳವಿಕಾ ಅವರ ಅಭಿಪ್ರಾಯವೂ ಪ್ರಕಟವಾಗಿತ್ತು.

ಮಾಳವಿಕಾ ಅವರ ಅಭಿಪ್ರಾಯ ಹೀಗಿದೆ:
ಮುಂದುವರೆದ ರಾಷ್ಟ್ರಗಳಿಗೆ ಬೇಡವಾದ ಸ್ಯಾನಿಟರಿ ಪ್ಯಾಡ್ಸ್‌ಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ಮೇಲೆ ಹೇರುತ್ತಿರುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಲಕಾಲದಿಂದ ಬಂದ ಬಟ್ಟೆ, ನಮ್ಮ ತಾಯಂದಿರವರೆಗೆ ಎಲ್ಲರೂ ಬಳಸುತ್ತಿದ್ದ ಬಟ್ಟೆ ಎಲ್ಲದ್ದಕ್ಕಿಂತ ಹೈಜೀನಿಕ್. ಬಟ್ಟೆ ಪ್ರಾಯೋಗಿಕ ಕಾರಣಗಳಿಂದ ಕಷ್ಟವಾಗಿರುವುದರಿಂಕದ ಮುಂದುವರೆದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್‌ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕಿದೆ. ದೊಡ್ಡ ಕಾರ್ಪೊರೇಟ್‌ಗಳಿಗೆ ತಮ್ಮ ಪ್ಯಾಡ್ಸ್‌ಗಳನ್ನು ಡಂಪ್ ಮಾಡುವುದಕ್ಕಿನ್ನು ಉಳಿದಿರುವುದು ನಮ್ಮಂಥ ದೇಶ. ಪರಂಪರಾಗತವಾಗಿ ಬಂದಿರುವುದು ಸರಿಯಲ್ಲ, ಪಾಶ್ಚಾತ್ಯ ದೇಶಗಳಿಂದ ಬರುವುದೆಲ್ಲಾ ಸರಿ ಎಂಬ ತಪ್ಪು ತಿಳಿವಳಿಕೆ ನಮಗೆ. 2015-16ರ National Family Health Survey (NFHS) ಪ್ರಕಾರ ಶೇ. 48.5 ಗ್ರಾಮೀಣ, ಶೇ. 77.5 ನಗರ ಅಂದರೆ ಶೇ. 57.6 ಒಟ್ಟೂ ಪ್ಯಾಡ್ಸ್‌ ಬಳಕೆದಾರರು. ಶೇ.12 ಜಿಎಸ್‌ಟಿಯಿಂದ ಡಿಮಾಂಡ್-ಸಪ್ಲೈ ಆಧಾರಿತವಾದ ಪ್ಯಾಡ್ಸ್‌ ಬಳಕೆ ಕಡಿಮೆಯಾಗುತ್ತದೆಂಬುದು ಸರಿಯಲ್ಲ, ಹಾಗೇ ಒಂದು ವೇಳೆಯಿದ್ದರೂ ಬೇರೆ ಪರಿಸರಸ್ನೇಹಿ ಪರ್ಯಾಯಗಳಿಗದು ಅನುವು ಮಾಡಿಕೊಡಲಿ!

ಬಟ್ಟೆಗಿಂತ ಸ್ಯಾನಿಟರಿ ಪ್ಯಾಡ್ ಉತ್ತಮ ಎಂದು ಮಹಿಳೆಯರು ಸ್ಯಾನಿಟರಿ ಪ್ಯಾಡ್‍ ಬಳಕೆಗೆ ಒಗ್ಗಿಕೊಂಡಿರುವಾಗ ಮಾಳವಿಕಾ ಅವರು ಸ್ಯಾನಿಟರಿ ಪ್ಯಾಡ್ ಬೇಕಿಲ್ಲ ಎಂದು ಹೇಳಿ ತಮ್ಮ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವುದಕ್ಕೆ ಸಾಮಾಜಿಕ ತಾಣದಲ್ಲಿ ನೆಟಿಜನ್‍ಗಳು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಫೇಸ್‍ಬುಕ್‍ನಲ್ಲಿ ಕಂಡು ಬಂದ ಪ್ರತಿಕ್ರಿಯೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT