ಶನಿವಾರ, ಡಿಸೆಂಬರ್ 7, 2019
25 °C

ಮಳೆಯಣ್ಣ

Published:
Updated:
ಮಳೆಯಣ್ಣ

ಮಳೆಯಣ್ಣ

ಹೇಗೆ ಹೋದೆ ಮೇಲೆ ನೀನು

ಮಳೆಯಣ್ಣಾ ?

ಮೇಲಿನಿಂದ ನೂಲಿನ ಹಾಗೆ

ಬೀಳುವೆ ಹೇಗಣ್ಣಾ ?

ಯಾರು ಅಲ್ಲಿ ನೇಯ್ಗೆ ಕೆಲಸ

ಮಾಡುತ್ತಿರುವರು ?

ಬಣ್ಣವಿಲ್ಲದ ಬಿಂದುವಾಗಿ

ಬೀಳುವೆ ಹೇಗೆ ?

ಡಿಕ್ಕಿ ಹೊಡೆದು ಜಾರಿ ಜಾರಿ

ಉದುರುತ್ತಿರುವೆಯಾ ?

ಬಿರುಗಾಳಿ ಬಿರುಸಿಗೆ ಹಾಗೆ ನೀನು

ಹೆದರುತ್ತಿರುವೆಯಾ ?

ಅಂಗೈಯೊಳಗೆ ಓಡಿ ಬಂದು

ಸೇರು ಮಳೆಯಣ್ಣಾ

ಭೂಮಿಯೆಲ್ಲಾ ನಲಿಯುವಂತ

ಜಾದು ಕಣಣ್ಣಾ...

–ಸುನೀತ. ಕುಶಾಲನಗರ

ಪ್ರತಿಕ್ರಿಯಿಸಿ (+)