ಶುಕ್ರವಾರ, ಡಿಸೆಂಬರ್ 6, 2019
17 °C

‘ಲೈನ್‌ಮನ್‌’ಗೆ ಪರ್ಯಾಯ ಹೆಸರು ಸೂಚಿಸಿ ಆಕರ್ಷಕ ಬಹುಮಾನ ಗೆಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಲೈನ್‌ಮನ್‌’ಗೆ ಪರ್ಯಾಯ ಹೆಸರು ಸೂಚಿಸಿ ಆಕರ್ಷಕ ಬಹುಮಾನ ಗೆಲ್ಲಿ

ಬೆಂಗಳೂರು: ‘ಲೈನ್‌ಮನ್‌ಗೆ ಪರ್ಯಾಯ ಹೆಸರು ಸೂಚಿಸಿ ಆಕರ್ಷಕ ಬಹುಮಾನ ಗೆಲ್ಲಿರಿ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಹಾಕಿದ್ದಾರೆ.

ರಾಜ್ಯದಲ್ಲಿ ಸಾವಿರಾರು ಲೈನ್‌ಮನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಹುದ್ದೆಯಲ್ಲಿ ಇರುವವರಿಗೆ ಬೇರೆ ಹೆಸರು ಇಡಲು ಇಂಧನ ಇಲಾಖೆ ಇಚ್ಛಿಸಿದೆ ಎಂದು ಅವರು ವಿವರಿಸಿದ್ದಾರೆ.

ಜುಲೈ 20ರೊಳಗೆ ಪರ್ಯಾಯ ಹೆಸರು ಸೂಚಿಸಬೇಕು. ಆಯ್ಕೆಯಾದ ಸಲಹೆಗೆ ಆಕರ್ಷಕ ಬಹುಮಾನ ಇರುತ್ತದೆ. ನೇರವಾಗಿ ಫೇಸ್‌ಬುಕ್‌ ಪುಟದಲ್ಲಿ, ಮೇಲ್‌ (dkshivakumarinc@gmail.com) ಅಥವಾ ವಾಟ್ಸ್‌ಆ್ಯಪ್‌ (9108461480) ಮೂಲಕವೂ ಹೆಸರುಗಳನ್ನು ಕಳುಹಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)