ಶನಿವಾರ, ಡಿಸೆಂಬರ್ 7, 2019
24 °C

ಕಾಶ್ಮೀರ: ಇಬ್ಬರು ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾಶ್ಮೀರ: ಇಬ್ಬರು ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆ ವ್ಯಾಪ್ತಿಯ ಅತಂರ ರಾಷ್ಟ್ರೀಯ ಗಡಿಯಲ್ಲಿ ಶನಿವಾರ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ ಪಾಕಿಸ್ತಾನ ಸೇನೆಗೆ ಪ್ರತ್ಯುತ್ತರ ನೀಡಿರುವ ಭಾರತಿಯ ಸೇನೆ ಇಬ್ಬರು ಪಾಕ್‌ ಸೈನಿಕರನ್ನು ಹೊಡೆದುರುಳಿಸಿದೆ.

ಪೂಂಚ್‌ ಜಿಲ್ಲೆ ವ್ಯಾಪ್ತಿಯಲ್ಲಿ ಸೇನಾ ನೆಲೆಗಳು ಮತ್ತು ಗ್ರಾಮಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ಸೇನೆ ಶನಿವಾರ ನಡೆಸಿದ್ದ ದಾಳಿಯಲ್ಲಿ ಭಾರತೀಯ ಸೇನೆಯ ಒಬ್ಬ ಯೋಧ ಮತ್ತು ಯೋಧನ ಪತ್ನಿ ಮೃತಪಟ್ಟಿದ್ದಾರೆ.

ಪಾಕ್‌ ದಾಳಿಗೆ ಭಾರತೀಯ ಪಡೆ ಪ್ರತಿ ದಾಳಿ ನಡೆಸಿದ್ದು, ಇದರಲ್ಲಿ ಏಳು ಪಾಕಿಸ್ತಾನಿಯರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಭದ್ರತಾ ಪಡೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಸೇನೆಯ ಇಬ್ಬರು ಸೈನಿಕರು ಹಾಗೂ ಐವರು ನಾಗರಿಕರು ಮೃತಪಟ್ಟಿದ್ದು, 16 ನಾಗರಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಪಾಕಿಸ್ತಾನದ ಹಜಿರಾ ವಲಯದ ಗಡಿ ಗ್ರಾಮಗಳಲ್ಲಿ ನಡೆದ ದಾಳಿಯಲ್ಲಿ ಸಾವು ಸಂಭವಿಸಿರುವುದಾಗಿ ವರದಿಯಾಗಿದೆ.

ಪ್ರತಿಕ್ರಿಯಿಸಿ (+)