ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಯಂ ಪ್ರಭಾ’ ವಾಹಿನಿ ಮೂಲಕ ಇಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ ಪ್ರವೇಶ ಪರೀಕ್ಷೆಗೆ ತರಬೇತಿ; ‘ಸ್ವಯಂ’ ಮೂಲಕ ಉಚಿತ ಆನ್‌ಲೈನ್‌ ಕೋರ್ಸ್‌

Last Updated 9 ಜುಲೈ 2017, 17:15 IST
ಅಕ್ಷರ ಗಾತ್ರ

ನವದೆಹಲಿ: ಇಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕೋರ್ಸ್‌ಗಳಿಗೆ ಸೇರಲು ಸಜ್ಜಾಗುವ ಆಕಾಂಕ್ಷಿಗಳು ಯಾವುದೇ ಕೋಚಿಂಗ್‌ ಕೇಂದ್ರಗಳಿಗೆ ಹೋಗದೇ ಮನೆಯಲ್ಲಿ ಟಿವಿ ನೋಡುತ್ತಲೇ ಸಿದ್ಧತೆ ನಡೆಸಬಹುದು!

ಪ್ರವೇಶ ಪರೀಕ್ಷೆಗಳ ಸಿದ್ಧತೆಗೆ ಸಹಕಾರಿಯಾಗಬಲ್ಲ ನಾಲ್ಕು ಟಿವಿ ವಾಹಿನಿಗಳಿಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಭಾನುವಾರ ಚಾಲನೆ ನೀಡಿದರು.
ಈ ವಾಹಿನಿಗಳ ಮೂಲಕ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ತಜ್ಞರು ತರಬೇತಿ ನೀಡಲಿದ್ದಾರೆ.

ಇದರೊಂದಿಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉಪಯುಕ್ತವಾಗುವ 28 ಡೈರೆಕ್ಟ್‌–ಟು–ಹೋಮ್‌(ಡಿಟಿಎಚ್‌) ಸ್ಯಾಟೆಲೈಟ್‌ ವಾಹಿನಿಗಳಿಗೆ ಚಾಲನೆ ನೀಡಿದ್ದಾರೆ.

ಸಾರ್ವಜನಿಕರಿಗೆ ‘ಸ್ವಯಂ’ ವೆಬ್‌ಸೈಟ್ ಮೂಲಕ ಉಚಿತ ಆನ್‌ಲೈನ್‌ ಕೋರ್ಸ್‌ (massive open online courses (MOOCs))ಗಳಿಗೆ ಚಾಲನೆ ನೀಡಿದರು.

ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಗಳ ಸಹಯೋಗದಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ಸಹಕಾರಿಯಾಗುವ ತರಬೇತಿ ನಡೆಯಲಿದೆ. 32 ಶೈಕ್ಷಣಿಕ ವಾಹಿನಿಗಳು ‘ಸ್ವಯಂ ಪ್ರಭಾ’ ಹೆಸರಿನೊಂದಿಗೆ ದಿನದ 24 ಗಂಟೆಯೂ ಪ್ರಸಾರಗೊಳ್ಳಲಿವೆ.

ಸ್ವಯಂ ಆನ್‌ಲೈನ್‌ ಕೋರ್ಸ್‌: ಪಿಯುಸಿ ಮಟ್ಟದ 29 ವಿಷಯಗಳು, 210 ಪದವಿ ಕೋರ್ಸ್‌ಗಳು, ಇಂಜಿನಿಯರಿಂಗ್‌ ಹಾಗೂ ಮ್ಯಾನೇಜ್‌ಮೆಂಟ್‌ ಸೇರಿದಂತೆ ಇತರೆ ವಿಭಾಗಗಳಲ್ಲಿನ 192 ಸ್ನಾತಕೋತ್ತರ ಪದವಿ ಕೋರ್ಸ್‌ಗಳು, 14 ಸರ್ಟಿಫಿಕೆಟ್‌ ಕೋರ್ಸ್‌ಗಳು ಹಾಗೂ ಮೂರು ಡಿಪ್ಲೊಮಾ ಕಾರ್ಯಕ್ರಮಗಳು ಆನ್‌ಲೈನ್‌ ಮೂಲಕ ಉಚಿತವಾಗಿ ಪಡೆಯಬಹುದಾಗಿದೆ.

ಸರ್ಟಿಫಿಕೆಟ್‌, ಡಿಪ್ಲೊಮಾ ಹಾಗೂ ಪದವಿ ಕೋರ್ಸ್‌ಗಳಿಗಾಗಿ ನಿಯಮಿತ ಶುಲ್ಕ ಭರಿಸಬೇಕಾಗುತ್ತದೆ.

ಸ್ವಯಂ: swayam.gov.in

ಸ್ವಯಂ ಪ್ರಭಾ: www.swayamprabha.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT