ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಡಿ.ಸಿ ಚಾರಿಟಬಲ್‌ ದಂತ ಆಸ್ಪತ್ರೆಗಳ ಉದ್ಘಾಟನೆ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಖುಷಿ ಡೆಂಟಲ್‌ ಕ್ಲಿನಿಕ್‌ (ಕೆಡಿಸಿ) ಫೌಂಡೇಷನ್‌ನ ಐದು ಚಾರಿಟಿ ಆಸ್ಪತ್ರೆಗಳನ್ನು ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ಅವರು  ಭಾನುವಾರ ಉದ್ಘಾಟಿಸಿದರು.

ಬೆಂಗಳೂರಿನ ರಾಜಾಜಿನಗರ, ಬಸವೇಶ್ವರನಗರ, ಕೋಣನಕುಂಟೆ, ವೈಟ್‌ಫೀಲ್ಡ್‌ ಹಾಗೂ ಧಾರವಾಡದಲ್ಲಿ ಚಾರಿಟಬಲ್‌ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ.
ಕೆಡಿಸಿ ಡೆಂಟಲ್ ಫೌಂಡೇಷನ್‌ನ ಟ್ರಸ್ಟಿ ಡಾ.ನಿರಂಜನ್ ಸಿ.ಪರಮ್‌ಶೆಟ್ಟಿ ಮಾತನಾಡಿ, ‘ಚಾರಿಟಿ ಆಸ್ಪತ್ರೆಗಳಲ್ಲಿ ಸಮಾಲೋಚನೆ, ಹಲ್ಲಿನ ಸೆಟ್‌ ಅಳವಡಿಕೆ, ಹಲ್ಲು ಕೀಳುವುದನ್ನು ಎಲ್ಲರಿಗೂ  ಉಚಿತವಾಗಿ ಮಾಡಲಾಗುತ್ತದೆ.  ಸುಧಾರಿತ ದಂತ ಚಿಕಿತ್ಸೆಯಾದ ರೂಟ್ ಕೆನಾಲ್ ಚಿಕಿತ್ಸೆ, ಕ್ರೌನ್ಸ್, ವಸಡಿನ ಚಿಕಿತ್ಸೆಗಳನ್ನು ಬಡತನದ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ಮಾಡಲಾಗುತ್ತದೆ. ಉಳಿದವರಿಗೆ ರಿಯಾಯಿತಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ’ ಎಂದು ತಿಳಿಸಿದರು.

‘ದೇಶದಲ್ಲಿ ಶೇ 80ಕ್ಕೂ ಹೆಚ್ಚು ಜನರು ದಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ 65ರಷ್ಟು ಮಕ್ಕಳಿಗೆ ದಂತ ಕುಳಿಗಳಿವೆ. ಶೇ 35ರಷ್ಟು ಮಕ್ಕಳಿಗೆ ದೋಷಪೂರ್ಣ ದಂತಪಂಕ್ತಿ, ಶೇ 50ರಷ್ಟು ವಯಸ್ಕರಿಗೆ ವಸಡಿನ ಸಮಸ್ಯೆಗಳಿವೆ. ಆದರೆ, ದಂತ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ದಂತ ಆಸ್ಪತ್ರೆಗಳು ಎಲ್ಲ ಕಡೆಗಳಲ್ಲಿ ಲಭ್ಯ ಇಲ್ಲ. ಹೀಗಾಗಿ ಚಾರಿಟಿ ಆಸ್ಪತ್ರೆಗಳನ್ನು ಆರಂಭಿಸಿದ್ದೇವೆ’ ಎಂದು ಅವರು ಹೇಳಿದರು.

ಚಾರಿಟಿ ಆಸ್ಪತ್ರೆಗಳ ವಿಳಾಸ

ರಾಜಾಜಿನಗರ
 1ನೇ ಮಹಡಿ, ಉನ್ನತಿ ಆರ್ಕೇಡ್, ಶನಿಮಹಾತ್ಮ ದೇವಾಲಯದ ಎದುರು, ನವರಂಗ್‌, ರಾಜಾಜಿನಗರ.
ಬಸವೇಶ್ವರನಗರ
1ನೇ ಮಹಡಿ, ಕೆ.ಎಚ್‌.ಬಿ ಕಾಲೊನಿ, 80 ಅಡಿ ರಸ್ತೆ, ಪುಣ್ಯ ಆಸ್ಪತ್ರೆ ಪಕ್ಕ, ಬಸವೇಶ್ವರನಗರ.
ವೈಟ್‌ಫೀಲ್ಡ್‌
 2ನೇ ಮಹಡಿ, ಎಲ್‌.ಜಿ. ಕಾಂಪ್ಲೆಕ್ಸ್, ಹೂಡಿ ಜಂಕ್ಷನ್ ಬಳಿ, ಭಾರತ್ ಪೆಟ್ರೋಲಿಯಂ ಬಂಕ್ ಎದುರು, ವೈಟ್‌ಫೀಲ್ಡ್‌.
ಕೋಣನಕುಂಟೆ
 1ನೇ ಮಹಡಿ, ಶ್ರೀನಿವಾಸ ದೇವಾಲಯದ ಎದುರು, ಓಲ್ಡ್ ಬ್ಯಾಂಕ್ ಕಾಲೊನಿ, ಚುಂಚನಘಟ್ಟ ಮುಖ್ಯರಸ್ತೆ, ಕೋಣನಕುಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT