ಮಂಗಳವಾರ, ಡಿಸೆಂಬರ್ 10, 2019
16 °C

ಆಕಾಶ್‌, ಜೂಡಿ ಮುಡಿಗೆ ಕಿರೀಟ

Published:
Updated:
ಆಕಾಶ್‌, ಜೂಡಿ ಮುಡಿಗೆ ಕಿರೀಟ

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಆಕಾಶ್‌ ಅಶೋಕ್‌ ಕುಮಾರ್‌ ಮತ್ತು ಜೂಡಿ ಆಲ್ಬನ್‌ ಅವರು ಎಆರ್‌ಸಿ ಕರ್ನಾಟಕ ರಾಜ್ಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಅಮೀಬಾ ಸೆಂಟರ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಕಾಶ್‌ ಅವರು 69 ಪಿನ್‌ಗಳ ಅಂತರದಿಂದ ಮಾಜಿ ರಾಷ್ಟ್ರೀಯ ಚಾಂಪಿಯನ್‌ ವಿಜಯ್‌ ಪಂಜಾಬಿ ಅವರ ಸವಾಲು ಮೀರಿದರು. ಮೊದಲ ಗೇಮ್‌ನಲ್ಲಿ 208 ಸ್ಕೋರ್‌ ಕಲೆಹಾಕಿದ ಆಕಾಶ್‌ ಎರಡನೇ ಗೇಮ್‌ ನಲ್ಲಿ 235 ಸ್ಕೋರ್‌ ಸಂಗ್ರಹಿಸಿ ಮಿಂಚಿದರು.

ಮಹಿಳೆಯರ  ವಿಭಾಗದಲ್ಲಿ  ಜೂಡಿ  10 ಪಿನ್‌ಗಳ ಅಂತರ ದಿಂದ ಚೇತನಾ ರಾಜಶೇಖರ ಅವರನ್ನು ಸೋಲಿಸಿದರು.

ಪ್ರತಿಕ್ರಿಯಿಸಿ (+)