ಶುಕ್ರವಾರ, ಡಿಸೆಂಬರ್ 6, 2019
17 °C

11.2 ಕೋಟಿ ಜಿಯೋ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ? ಇದು ಸುಳ್ಳು ಎಂದ ರಿಲಯನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

11.2 ಕೋಟಿ  ಜಿಯೋ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ? ಇದು ಸುಳ್ಳು ಎಂದ ರಿಲಯನ್ಸ್‌

ನವದೆಹಲಿ: ರಿಲಯನ್ಸ್‌ ಜಿಯೋ ಗ್ರಾಹಕರ ಆಧಾರ್‌ ಸಂಖ್ಯೆ ಸೇರಿದಂತೆ  ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಫೋನ್‌್ಆರೇನಾ ವೆಬ್‌ಸೈಟ್‌ ಸೋಮವಾರ ಸುದ್ದಿಯೊಂದನ್ನು ಪ್ರಕಟಿಸಿದೆ.

ಫೋನ್‌್ಆರೇನಾ ವೆಬ್‌ಸೈಟ್‌  ಮೊಬೈಲ್ ಫೋನ್‌, ನೆಟ್‌ವರ್ಕ್‌  ಹಾಗೂ ಮೊಬೈಲ್‌ ಉಪಕರಣಗಳ ಬಗ್ಗೆ ಸುದ್ದಿ ಮತ್ತು  ಮಾಹಿತಿ ಪ್ರಕಟಿಸುವ ವೆಬ್‌ಸೈಟ್‌ ಆಗಿದೆ.  11.2 ಕೋಟಿ ಜಿಯೋ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಕೆಲ ಜಿಯೊ ಬಳಕೆದಾರರ ಪಟ್ಟಿಯನ್ನು ಪ್ರಕಟಿಸಿದೆ. 

ಜಿಯೋ ಸಿಮ್‌ ಖರೀದಿ ಮಾಡುವಾಗ ಗ್ರಾಹಕರು ಕಂಪೆನಿಗೆ ನೀಡಿರುವ ವೈಯಕ್ತಿಕ ಮಾಹಿತಿ ಅಂದರೆ, ಆಧಾರ್‌ ಸಂಖ್ಯೆ, ಮನೆ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇ–ಮೇಲ್‌ ವಿಳಾಸಗಳು ಸೋರಿಯಾಗಿವೆ ಎಂದು ಫೋನ್‌್ಆರೇನಾ ವರದಿ ಮಾಡಿದೆ.

ಗ್ರಾಹಕರ ಡೇಟಾ ಸೋರಿಕೆಯಾಗಿಲ್ಲ: ರಿಲಯನ್ಸ್‌

ಜಿಯೋ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿಲ್ಲ ಎಂದು   ರಿಲಯನ್ಸ್‌ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.  ಈ ಸುದ್ದಿ ಪ್ರಟಿಸಿದ ವೆಬ್‌ಸೈಟ್‌  ಬಗ್ಗೆ ಪರಿಶೀಲನೆ ನಡೆಸಿ  ಪೊಲೀಸರಿಗೆ ದೂರು ನೀಡಲಾಗುವುದು.   ಜಿಯೋ ಬಳಕೆದಾರರು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ರಿಲಯನ್ಸ್‌ ಕಂಪೆನಿ  ಗ್ರಾಹಕರಲ್ಲಿ ಮನವಿ ಮಾಡಿದೆ.

ಪ್ರತಿಕ್ರಿಯಿಸಿ (+)