ಶುಕ್ರವಾರ, ಡಿಸೆಂಬರ್ 6, 2019
17 °C

‘ಮುಗುಳು ನಗೆ’ಯ ಹಾಡು ವೈರಲ್‌ ಆಯ್ತು ‘ಹೊಡಿ ಒಂಬತ್ತ್‌’ !!

Published:
Updated:
‘ಮುಗುಳು ನಗೆ’ಯ ಹಾಡು ವೈರಲ್‌ ಆಯ್ತು  ‘ಹೊಡಿ ಒಂಬತ್ತ್‌’ !!

ಬೆಂಗಳೂರು:  ನಟ ಗಣೇಶ್‌ ಅಭಿನಯದ ‘ಮುಗುಳು ನಗೆ’ ಸಿನಿಮಾದ ‘ಹೊಡಿ ಒಂಬತ್ತ್‌ ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮುಗುಳು ನಗೆ ಚಿತ್ರತಂಡ ನಿನ್ನೆ ಈ ಹಾಡನ್ನು ಯೂಟ್ಯೂಬ್‌ ನಲ್ಲಿ ಅಪ್‌ಲೋಡ್‌ ಮಾಡಿದೆ.  ಒಂದೇ ದಿನಕ್ಕೆ ಸುಮಾರು 40 ಸಾವಿರ ಜನರು ಈ ಹಾಡನ್ನು ವೀಕ್ಷಣೆ ಮಾಡಿದ್ದಾರೆ.

ಸ್ಟಾರ್‌ ನಿರ್ದೇಶಕ ಯೋಗರಾಜ್‌ ಭಟ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.  ಹೊಡಿ  ಒಂಬತ್ತ್‌ ಹಾಡನ್ನು ಅವರೇ ಬರೆದಿದ್ದಾರೆ. ವಿಜಯ ಪ್ರಕಾಶ್‌ ಹಾಡಿರುವ ಈ ಹಾಡಿಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)