ಭಾನುವಾರ, ಡಿಸೆಂಬರ್ 8, 2019
20 °C

ಹಾಸನ: ಪೊಲೀಸರ ಟೋಪಿ ಸಮೇತ ಕೋಬ್ರಾ ಬೈಕ್‌ ಎಗರಿಸಿ ನಗರ ಸುತ್ತಿದ ಭೂಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಪೊಲೀಸರ ಟೋಪಿ ಸಮೇತ ಕೋಬ್ರಾ ಬೈಕ್‌ ಎಗರಿಸಿ ನಗರ ಸುತ್ತಿದ ಭೂಪ!

ಹಾಸನ: ಇಲ್ಲಿನ ಸಂತೆಪೇಟೆಯಲ್ಲಿ ಎ.ಎಸ್ಐ ಟೋಪಿ ಸಮೇತ ಕೋಬ್ರಾ ಬೈಕ್ ಎಗರಿಸಿದ ಚಾಲಾಕಿ ಯುವಕ ನಗರವನ್ನು ಸುತ್ತು  ಹಾಕಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪೊಲೀಸ್ ಟೋಪಿ ಧರಿಸಿ ಕೋಬ್ರಾ ಬೈಕ್ ಓಡಿಸುತ್ತಿರುವುದನ್ನು ಗಮನಿಸಿದ ಸಂಚಾರ ಪೊಲೀಸರು ಆ ಚಾಲಾಕಿಯನ್ನು ಹಿಡಿದಿದ್ದಾರೆ.

ಸಿನಿಮೀಯ ರೀತಿಯಲ್ಲಿ ಯುವಕನನ್ನು ಚೇಸ್ ಮಾಡಿದ ಪೊಲೀಸರು ಇಲ್ಲಿನ  ಗಾಂಧಿ ಬಜಾರ್ ವೃತ್ತದಲ್ಲಿ ಸ್ಥಳೀಯರ ನೆರವಿನೊಂದಿಗೆ  ಆ ಯುವಕನನ್ನು ಹಿಡಿದಿದ್ದಾರೆ.

ಕುಡಿದ ಮತ್ತಿನಲ್ಲಿ ಆ ಯುವಕ  ಹಾಗೆ ಮಾಡಿದ್ದಾನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)