ಈ ಸಾಧನದ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಾಗರಾಜ್, ‘ರಾಜ್ಯದ ಹಲವು ಮಠಗಳು, ವಿದ್ಯಾರ್ಥಿನಿಲಯಗಳು ಹಾಗೂ ಕಾರಾಗೃಹಗಳಿಗೆ ಭೇಟಿ ನೀಡಿ, ಅವರ ಬೇಡಿಕೆಯ ಮೇಲೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಯಿತು. ಬೃಹತ್ ಪ್ರಮಾಣದಲ್ಲಿ ಮುದ್ದೆ ತಯಾರಿಸಲು ಈ ಯಂತ್ರದ ತಂತ್ರಜ್ಞಾನವನ್ನು ಸಂಸ್ಥೆಯಿಂದ ಪಡೆಯಬಹುದು. ಯಂತ್ರ ತಯಾರಿಗೆ ಗರಿಷ್ಠ ₹ 3 ಲಕ್ಷ ಖರ್ಚಾಗುವುದು’ ಎಂದರು.