ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಾಲಕೃಷ್ಣ ಗಾಂಧಿ ವಿರೋಧ ಪಕ್ಷಗಳ ಅಭ್ಯರ್ಥಿ

Last Updated 11 ಜುಲೈ 2017, 19:35 IST
ಅಕ್ಷರ ಗಾತ್ರ

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ 18 ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.

ನಂತರ ಸೋನಿಯಾ ಅವರು ಗುಲಾಂ ನಬಿ ಆಜಾದ್, ಡೆರೆಕ್ ಓಬ್ರಯಾನ್‌ ಮತ್ತು ಸೀತಾರಾಮ್‌ ಯೆಚೂರಿ ಅವರನ್ನು ಒಳಗೊಂಡ ಮೂವರ ಸಮಿತಿಯನ್ನು ರಚಿಸಿ ಗೋಪಾಲಕೃಷ್ಣ ಗಾಂಧಿ ಅವರ ಒಪ್ಪಿಗೆ ಪಡೆಯಲು ಸೂಚಿಸಿದರು.

ಚೆನ್ನೈಯಲ್ಲಿ ಇದ್ದ ಗಾಂಧಿ ಅವರನ್ನು ಸಂಪರ್ಕಿಸಿದ ಈ ಸಮಿತಿಯು, ಉಪ ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಆಗುವಂತೆ ಕೋರಿತು. ಇದಕ್ಕೆ ಗಾಂಧಿ ಒಪ್ಪಿಗೆ ನೀಡಿದ ನಂತರ ಸೋನಿಯಾ ಅವರು ಅಧಿಕೃತವಾಗಿ ಗಾಂಧಿ ಹೆಸರನ್ನು ಮಾಧ್ಯಮಗಳ ಎದುರು ಪ್ರಕಟಿಸಿದರು.
ವಿರೋಧ ಪಕ್ಷಗಳ ನಾಯಕರು ಕಳೆದ ಕೆಲವು ದಿನಗಳಿಂದ ಉಪ ರಾಷ್ಟ್ರಪತಿ ಚುನಾವಣೆಗೆ ಸಹಮತದ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಘೋಷಣೆಯಾದ ಬಳಿಕ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಘೋಷಿಸಲಾಗಿತ್ತು. ಈ  ವಿಳಂಬವೇ ಎನ್‌ಡಿಎ ಅಭ್ಯರ್ಥಿಗೆ ತಾವು ಬೆಂಬಲ ಘೋಷಿಸಲು ಕಾರಣ ಎಂದು ಜೆಡಿಯು ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದರು. ಹಾಗಾಗಿ ಈ ಬಾರಿ ಎನ್‌ಡಿಎ ಅಭ್ಯರ್ಥಿ ಘೋಷಣೆಯನ್ನು ಕಾಯದೆ ವಿರೋಧ ಪಕ್ಷಗಳು ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿವೆ.
ಸಭೆಯಲ್ಲಿ ಜೆಡಿಯು ಮುಖಂಡ ಶರದ್ ಯಾದವ್ ಸಹ ಉಪಸ್ಥಿತರಿದ್ದರು ಮತ್ತು ಗೋಪಾಲಕೃಷ್ಣ   ಗಾಂಧಿ ಅವರಿಗೆ ಪಕ್ಷದ ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ (ಕಾಂಗ್ರೆಸ್), ಡೆರೆಕ್ ಒಬ್ರೆನ್  (ತೃಣಮೂಲ ಕಾಂಗ್ರೆಸ್), ಸೀತಾರಾಂ ಯೆಚೂರಿ (ಸಿಪಿಐ), ಒಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್),  ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ (ಜೆಡಿಎಸ್), ಡಿ. ರಾಜಾ (ಸಿಪಿಐ), ಪ್ರಫುಲ್ ಪಟೇಲ್ (ಎನ್‌ಸಿಪಿ), ಜಯಪ್ರಕಾಶ್ ನಾರಾಯಣ್ ಯಾದವ್ (ಆರ್‌ಜೆಡಿ), ನರೇಶ್ ಅಗರ್‌ವಾಲ್ (ಎಸ್‌ಪಿ) ಮತ್ತು ಎಸ್‌. ಸಿ. ಮಿಶ್ರಾ (ಬಿಎಸ್‌ಪಿ) ಪಾಲ್ಗೊಂಡಿದ್ದರು.

ಎನ್‌ಡಿಎ ಅಭ್ಯರ್ಥಿ ಗೆಲುವು ಖಚಿತ: ಆಗಸ್ಟ್ 5ರಂದು ನಡೆಯಲಿರುವ ಚುನಾವಣೆಯಲ್ಲಿ ನಾಮಕರಣ ಸದಸ್ಯರೂ ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಉಪರಾಷ್ಟ್ರಪತಿ  ಅವರನ್ನು ಆಯ್ಕೆ ಮಾಡಲಿದ್ದಾರೆ.
ಒಟ್ಟು 790 ಸದಸ್ಯರ ಪೈಕಿ ಎನ್‌ಡಿಎ ಪರ 550 ಸದಸ್ಯರು ಇರುವುದರಿಂದ ಬಿಜೆಪಿ ನೇತೃತ್ವದ ಪಕ್ಷಗಳ ಅಭ್ಯರ್ಥಿಯ ಗೆಲುವು ಖಚಿತವಾಗಿದೆ.

ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಹಾತ್ಮ ಗಾಂಧಿ ಅವರ ಮೊಮ್ಮಗ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ಗೋಪಾಲಕೃಷ್ಣ ಗಾಂಧಿ ಅವರು ಆಯ್ಕೆಯಾಗಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಈಗ ಅವರು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ.

ಜನನ: 1946ರ ಏಪ್ರಿಲ್‌ 22
ತಂದೆ–ತಾಯಿ: ದೇವದಾಸ ಗಾಂಧಿ ಮತ್ತು ಲಕ್ಷ್ಮಿ ಗಾಂಧಿ
ಕುಟುಂಬ: ಹೆಂಡತಿ–ತಾರಾ ಗಾಂಧಿ, ಇಬ್ಬರು ಹೆಣ್ಣು ಮಕ್ಕಳು
ಶಿಕ್ಷಣ: ದೆಹಲಿಯ ಸೇಂಟ್‌ ಸ್ಟೀಫನ್‌ ಕಾಲೇಜಿನಿಂದ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ
ಐಎಎಸ್‌ ಅಧಿಕಾರಿಯಾಗಿದ್ದ ಅವಧಿ: 1968–2003

1985–87: ಉಪರಾಷ್ಟ್ರಪತಿಯ ಕಾರ್ಯದರ್ಶಿ
1987–92: ರಾಷ್ಟ್ರಪತಿಯ ಜಂಟಿ ಕಾರ್ಯದರ್ಶಿ
1992: ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನ್‌ನಲ್ಲಿ ಸಂಸ್ಕೃತಿ ವಿಭಾಗದ ಮುಖ್ಯಸ್ಥ
1996: ದಕ್ಷಿಣ ಆಫ್ರಿಕಾ ಮತ್ತು ಲೆಸೆಥೊದಲ್ಲಿ ಭಾರತದ ಹೈಕಮಿಷನರ್‌
1997–2000: ರಾಷ್ಟ್ರಪತಿಯ ಕಾರ್ಯದರ್ಶಿ
2000: ಶ್ರೀಲಂಕಾದಲ್ಲಿ ಭಾರತದ ಹೈಕಮಿಷನರ್‌
2002: ನಾರ್ವೆ ಮತ್ತು ಐಸ್‌ಲ್ಯಾಂಡ್‌ಗೆ ಭಾರತದ ರಾಯಭಾರಿ
2004–2009: ಪಶ್ಚಿಮ ಬಂಗಾಳದ ರಾಜ್ಯಪಾಲ

ಈಗ ಅವರು ಅಶೋಕ ವಿ.ವಿಯಲ್ಲಿ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT