ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಗ್ವಾದಕ್ಕೆ ತಿರುಗಿದ ಪ್ರಧಾನಿ ಮೋದಿ ಕುರಿತ ಚರ್ಚೆ: ಮುರಿದುಬಿದ್ದ ವಿವಾಹ!

Last Updated 12 ಜುಲೈ 2017, 13:59 IST
ಅಕ್ಷರ ಗಾತ್ರ

ಲಖನೌ: ಶೀಘ್ರವೇ ಸಪ್ತಪದಿ ತುಳಿಯಬೇಕಿದ್ದ ಜೋಡಿ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಪರ–ವಿರೋಧ ಚರ್ಚೆಯಾಗಿ ಕೊನೆಗೆ ವಿವಾಹವೇ ಮುರಿದುಬಿದ್ದ ಅಚ್ಚರಿಯ ಪ್ರಕರಣ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದಲ್ಲಿ ವ್ಯಾಪಾರಸ್ಥನಾಗಿರುವ ಯುವಕ ಮತ್ತು ಸರ್ಕಾರಿ ಉದ್ಯೋಗಿ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇಬ್ಬರೂ ತಮ್ಮ ಮದುವೆಯ ವಿಷಯವನ್ನು ಚರ್ಚಿಸಲು ಇತ್ತೀಚೆಗೆ ದೇವಾಲಯದ ಬಳಿ ಭೇಟಿಯಾಗಿದ್ದಾರೆ. ಮದುವೆಗೆ ತಗಲುವ ಖರ್ಚು ವೆಚ್ಚಗಳ ಕುರಿತು ಮಾತುಕತೆ ಆರಂಭವಾಗಿ ಅದು ದೇಶದ ಆರ್ಥಿಕ ಸ್ಥಿತಿಯತ್ತ ತಿರುಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಕ್ಕೆ ಕಾರಣವಾಗಿದೆ.

‘ದೇಶ ಆರ್ಥಿಕ ಸ್ಥಿತಿ ಹದಗೆಡಲು ಪ್ರಧಾನಿ ಮೋದಿ ಅವರೇ ಕಾರಣ ಎಂದು ಯುವಕ ಅಭಿಪ್ರಾಯಪಟ್ಟಿದ್ದಾನೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿ ಮೋದಿಗೆ ಬೆಂಬಲ ಸೂಚಿಸಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ಸಾಗಿದೆ’ ಎಂದು ಹೇಳಿದ್ದಾಳೆ.

ಮಾತುಕತೆ ಮುಂದುವರಿದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಮದುವೆಯಾಗುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ‌ಈ ಕುರಿತು ತಮ್ಮ ನಿರ್ಧಾರವನ್ನು ಪೋಷಕರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT