ಶುಕ್ರವಾರ, ಡಿಸೆಂಬರ್ 13, 2019
20 °C

ಮದುವೆಯಾಗಲಿದ್ದಾರೆ ಅರ್ಜುನ್ ಕಪೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುವೆಯಾಗಲಿದ್ದಾರೆ ಅರ್ಜುನ್ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್ ಪ್ರತಿ ಸಿನಿಮಾ ಮಾಡಿದಾಗಲೂ ಆ ಸಿನಿಮಾದ ನಾಯಕಿಯೊಂದಿಗೆ ಅವರ ಹೆಸರು ತಳುಕು ಹಾಕಿಕೊಳ್ಳುವುದು ಮಾಮೂಲಿ ಆಗಿಬಿಟ್ಟಿದೆ. ಸ್ವತಃ ಅರ್ಜುನ್ ಕಪೂರ್ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬಿಟ್ಟುಬಿಟ್ಟಿದ್ದಾರಂತೆ.

ಹಾಗಂತ ಅವರಿಗೆ ಹುಡಿಯರ ಬಗ್ಗೆ ಅಸಡ್ಡೆ ಎನ್ನುವಂತಿಲ್ಲ. ಅವರಿಗೂ ಮದುವೆಯಾಗಿ ಸೆಟಲ್ ಆಗುವ ಆಲೋಚನೆ ಇದೆ. ಈಗಾಗಲೇ ಮದುವೆಯ ಬಗ್ಗೆರ ಕಸನೂ ಕಂಡಿರುವ ಈ ನಟ ಇನ್ನೆರಡು ವರ್ಷದಲ್ಲಿ ಮದುವೆಯಾಗುವುದು ಖಾಯಂ ಎಂದಿದ್ದಾರೆ. ಆದರೆ ಭಾವಿ ವಧುವಿನ ಬಗ್ಗೆ ಮಾತ್ರ ತುಟಿ ಬಿಚ್ಚಿಲ್ಲ.

‘ಸಹ ನಟಿಯರೊಂದಿಗೆ ನನ್ನ ಹೆಸರು ಕೇಳಿ ಕೇಳಿ ಬೇಸರವಾಗಿಬಿಟ್ಟಿದೆ, ನಾನು ಕೆಲಸದ ಬಗ್ಗೆ ಬಹಳ ಶ್ರದ್ಧೆ ಉಳ್ಳವನು ಡೇಟಿಂಗ್, ಪ್ರೀತಿಗಳಿಗೆ ಈಗ ಸಮಯವಿಲ್ಲ. ಅದಕ್ಕಿನ್ನೂ ಎರಡು ವರ್ಷ ಸಮಯವಿದೆ’ ಎಂದಿದ್ದಾರೆ ಅರ್ಜುನ್ ಕಪೂರ್.

ಈ ಹಿಂದೆ ಸೋನಕ್ ಕಪೂರ್, ಅಲಿಯಾ ಭಟ್, ಶ್ರದ್ಧಾ ಕಪೂರ್ ಅವರೊಂದಿಗೆ ಅರ್ಜುನ್ ಹೆಸರು ಕೇಳಿಬಂದಿತ್ತು. ಈಗ ನಟಿ ಅತಿಯಾ ಶೆಟ್ಟಿ ಜೊತೆಗೆ ಅರ್ಜುನ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಗಾಸಿಪ್‌ ಇದೆ. ಆದರೆ ಇದನ್ನು ಅರ್ಜುನ್ ಇದನ್ನು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.

2012ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅರ್ಜುನ್ ಆರಕ್ಕೇರದ ಮೂರಕ್ಕಿಳಿಯದ ನಾಯಕರಾಗಿಯೇ ಇದ್ದಾರೆ. ದೊಡ್ಡ ಹಿಟ್‌ ಒಂದನ್ನು ನೀಡಲು ಶ್ರಮಿಸುತ್ತಿರುವ ಅರ್ಜುನ್‌ಗೆ ಈ ತಿಂಗಳು ಬಿಡುಗಡೆ ಆಗಲಿರುವ ‘ಮುಬಾರಕಾನ್’ ಚಿತ್ರದ ಭಾರಿ ವಿಶ್ವಾಸವಿದೆಯಂತೆ.

ಹುತಾರಾಗಣದ ಈ ಚಿತ್ರದಲ್ಲಿ ಅರ್ಜುನ್ ಅವರ ಚಿಕ್ಕಪ್ಪ ಅನಿಲ್ ಕಪೂರ್ ಅವರೂ ಕೂಡ ಇದ್ದಾರೆ. ಇಲಿಯಾನಾ ಡಿ ಕ್ರೂಜ್ ಮತ್ತು ಅತಿಯಾ ಶೆಟ್ಟಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರ ಇದೇ ತಿಂಗಳ 28ಕ್ಕೆ ಬಿಡುಗಡೆ ಆಗಲಿದೆ.

ಪ್ರತಿಕ್ರಿಯಿಸಿ (+)