ಬುಧವಾರ, ಫೆಬ್ರವರಿ 19, 2020
24 °C

‘ಜಂಟಲ್‌ಮನ್’ ಆದ ಸಿದ್ಧಾರ್ಥ್ ಮಲ್ಹೋತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜಂಟಲ್‌ಮನ್’ ಆದ ಸಿದ್ಧಾರ್ಥ್ ಮಲ್ಹೋತ್ರ

ಮನೆಯ ವಸ್ತುಗಳ ಮೇಲೆ ಯಾವುದೇ ದೂಳಿಲ್ಲ, ಸ್ವಚ್ಚವಾಗಿ ಗುಡಿಸಿ, ಒರೆಸಿದ ಮನೆ, ಶುಭ್ರವಾದ ಕಿಟಕಿ ಕರ್ಟನ್, ಒಗೆದು ಹಾಕಿದ ನೆಲಹಾಸು, ಬೆಡ್‌ಶೀಟ್. ಮನೆಯೊಳಗೆ ಒಂದು ವಸ್ತುವೂ ಚೆಲ್ಲಾಪಿಲ್ಲಿಯಾಲ್ಲ. ಎಲ್ಲಿ ನೋಡಿದರೂ ಅಚ್ಚುಕಟ್ಟು. ಹಾಗಂತ ಇದು ಗೃಹಿಣಿಯೊಬ್ಬರು ಸಂಭಾಳಿಸುತ್ತಿರುವ ಮನೆಯಲ್ಲ...

ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರ ಮನೆಯ ನೋಟವಿದು. ಆದರೆ ನಿಜ ಜೀವನದಲ್ಲಿ ಅಲ್ಲಾರೀ... ‘ಎ ಜಂಟಲ್‌ಮನ್’ ಸಿನಿಮಾದಲ್ಲಿ!
ಕಚೇರಿ ಕೆಲಸ, ಮನೆ ಕೆಲಸ ಯಾವುದಿದ್ದರೂ ಅಚ್ಚುಕಟ್ಟಾಗಿ ಮಾಡುವ ಮಿಸ್ಟರ್‌ ಪರ್ಫೆಕ್ಟ್‌ ಗೌರವ್ ಪಾತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರ ಅಭಿನಯಿಸಿದ್ದಾರೆ. ‘ಎ ಜಂಟಲ್‌ಮನ್’ ಸಿನಿಮಾದ ಮತ್ತೊಂದು ವಿಶೇಷವೆಂದರೆ ಸಿದ್ಧಾರ್ಥ್ ದ್ವಿಪಾತ್ರದಲ್ಲಿ ಅಭಿನಯಿಸಿರುವುದು.

ಅಚ್ಚುಕಟ್ಟು ವ್ಯಕ್ತಿತ್ವದ ಗೌರವ್ ಒಂದು ಪಾತ್ರವಾದರೆ, ತಂಟೆ–ತಕರಾರು ಮಾಡುವ ರಿಷಿ ಮತ್ತೊಂದು ಪಾತ್ರ. ಯುಟ್ಯೂಬ್‌ನ ಫಾಕ್ಸ್‌ ಸ್ಟಾರ್ ಹಿಂದಿ ಚಾನೆಲ್‌ನಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

ಜುಲೈ 9ರಂದು ಬಿಡುಗಡೆಯಾಗಿರುವ ಟ್ರೇಲರ್ ವೈರಲ್ ಆಗಿದೆ. ಇದುವರೆಗೆ 42 ಲಕ್ಷ ಬಾರಿ ವೀಕ್ಷಣೆಯಾಗಿದೆ. ಅದ್ಭುತವಾದ ಆ್ಯಕ್ಷನ್ ದೃಶ್ಯಗಳು ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತವೆ. ಜಾಕ್ವಲಿನ್ ಫರ್ನಾಂಡಿಸ್ ಪೋಲ್‌ ಡಾನ್ಸ್‌ ಮಾಡಿರುವ ಮಾದಕ ದೃಶ್ಯ ಟ್ರೇಲರ್‌ನಲ್ಲಿ ಮಿಂಚಿನಂತೆ ಬಂದು ಹೋಗಿದೆ.

ಸಿನಿಮಾವನ್ನು ರಾಜ್‌ ನಿರ್ದೇಶನ ಮಾಡಿದ್ದಾರೆ. ಫಾಕ್ಸ್‌ ಸ್ಟಾರ್ ಸ್ಟೂಡಿಯೊ ‘ಎ ಜಂಟಲ್‌ಮನ್’ ಸಿನಿಮಾ ನಿರ್ಮಾಣ ಮಾಡಿದೆ. ಸಿನಿಮಾ ಆಗಸ್ಟ್ 25ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)