ಭಾನುವಾರ, ಡಿಸೆಂಬರ್ 8, 2019
23 °C

ವಿಶ್ವ ಕಿರಿಯರ ಕುಸ್ತಿ: ರಾಜ್ಯದ ಅರ್ಜುನ ಹಲಕುರ್ಕಿ ಆಯ್ಕೆ

Published:
Updated:
ವಿಶ್ವ ಕಿರಿಯರ ಕುಸ್ತಿ: ರಾಜ್ಯದ ಅರ್ಜುನ ಹಲಕುರ್ಕಿ ಆಯ್ಕೆ

ಬಾಗಲಕೋಟೆ: ತಾಲ್ಲೂಕಿನ ಬೇವಿನ ಮಟ್ಟಿಯ ಅರ್ಜುನ ಹಲಕುರ್ಕಿ ವಿಶ್ವ ಕಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.

ದಾವಣಗೆರೆಯ ಕ್ರೀಡಾ ನಿಲಯದ ವಿದ್ಯಾರ್ಥಿಯಾದ ಅರ್ಜುನ ಹಲಕುರ್ಕಿ, ಗುರುವಾರ ಹರಿಯಾಣದ ಸೋನಿಪತ್‌ ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದರು.

‘ಆಗಸ್ಟ್ 1ರಿಂದ 6ರವರೆಗೆ ಫಿನ್ಲೆಂಡ್‌ ನಲ್ಲಿ ನಡೆಯಲಿರುವ ವಿಶ್ವ ಕಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಅರ್ಜುನ ಹಲ ಕುರ್ಕಿ ದೇಶವನ್ನು ಪ್ರತಿನಿಧಿಸಲಿದ್ದಾರೆ’ ಎಂದು ಅವರ ಕೋಚ್ ದಾವಣಗೆರೆಯ ಆರ್.ಶಿವಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆ ಹಿನ್ನೆಲೆಯಲ್ಲಿ ಜುಲೈ 4ರಿಂದ ಸೋನೆಪತ್‌ ನಲ್ಲಿ ಆರಂಭವಾಗಿರುವ ವಿಶೇಷ ತರ ಬೇತಿ ಶಿಬಿರದಲ್ಲಿ ರಾಜ್ಯದಿಂದ ಅರ್ಜುನ ಹಲಕುರ್ಕಿ, ಬಾಹುಬಲಿ ಶಿರಹಟ್ಟಿ, ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿ ಕಾರದ (ಎಸ್‌ಎಐ) ಹಾಸ್ಟೆಲ್‌ನ  ಪ್ರಶಾಂತಗೌಡ ಹಾಗೂ ಫಾಲಾಕ್ಷಗೌಡ ಪಾಲ್ಗೊಂಡಿದ್ದರು.

ಹರಿಯಾಣದ ಕುಸ್ತಿಪಟು ವಿಜೇಂ ದರ್‌ ಹಾಗೂ ಉತ್ತರಪ್ರದೇಶದ ರಾಕೇಶ್‌ ಸಿಂಗ್‌ ವಿರುದ್ಧ ಗೆಲುವು ಸಾಧಿಸಿದ ಅರ್ಜುನ, ಎರಡನೇ ಬಾರಿಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ. ಉಳಿದ ಮೂವರು ನಿರಾಸೆ ಅನುಭವಿಸಿದರು.

ಕಳೆದ ವರ್ಷ ಫ್ರಾನ್ಸ್‌ನಲ್ಲಿ ನಡೆದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿ ಪ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದರು. ಜೊತೆಗೆ ಟರ್ಕಿಯ ಅಂಕಾರದಲ್ಲಿ ನಡೆದ ವಿಶ್ವ ಶಾಲಾ ಕುಸ್ತಿಯಲ್ಲಿ ಬೆಳ್ಳಿ ಪದಕ ಪಡೆದಿದ್ದ ಅರ್ಜುನ, ನಂತರ ಫಿಲಿಪ್ಪಿನ್ಸ್‌ನ ಮನಿಲಾದಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿ ಯನ್‌ ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಪ್ರತಿಕ್ರಿಯಿಸಿ (+)