ಶುಕ್ರವಾರ, ಡಿಸೆಂಬರ್ 13, 2019
17 °C

‘ಅಯ್ಯೋ ಅದು ನಿಮ್ಮ ಸಂದೇಶವೇ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಯ್ಯೋ ಅದು ನಿಮ್ಮ ಸಂದೇಶವೇ?’

ಬಾಲಿವುಡ್‌ನ ಮುಂಚೂಣಿ ನಟ ನಟಿಯರ ಹುಟ್ಟುಹಬ್ಬಗಳಿಗೆ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಸಂದೇಶ ಕಳುಹಿಸಿದರೆ ‘ಬರ್ತ್‌ಡೇ ಬೇಬಿ’ಗಳು ಪ್ರತಿಕ್ರಿಯಿಸುವುದು ಬೇಡವೇ? ತಮ್ಮ ಸಂದೇಶವನ್ನು ನಿರ್ಲಕ್ಷಿಸಿದರೆ ಬಿಗ್‌ ಬಿ ತರಾಟೆಗೆ ತೆಗೆದುಕೊಳ್ಳದೇ ಬಿಡುತ್ತಾರಾ?

ಇತ್ತೀಚೆಗಷ್ಟೇ ಸೋನಂ ಕಪೂರ್‌ಗೆ ತರಾಟೆಗೆ ತೆಗೆದುಕೊಂಡಿದ್ದ ಅಮಿತಾಬ್‌, ಇದೀಗ ರಣವೀರ್ ಸಿಂಗ್‌ ಅವರ ಮೇಲೆ ರೇಗಿದ್ದಾರೆ.

ಆಗಿದ್ದಿಷ್ಟು: ರಣವೀರ್‌ ಸಿಂಗ್‌ ಹುಟ್ಟುಹಬ್ಬಕ್ಕೆ ಅಮಿತಾಬ್ ಬಚ್ಚನ್ ಕಳಿಸಿದ ಸಂದೇಶಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅಮಿತಾಬ್ ಈ ಬಗ್ಗೆ ಖುದ್ದಾಗಿ ರಣವೀರ್ ಸಿಂಗ್‌ ಬಳಿ ಕಾರಣ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಣವೀರ್ ‘ಹೌದು ನಾನು ನಿಮ್ಮ ಸಂದೇಶ ನೋಡಿದೆ. ಆದರೆ ನೀವು ನನಗೆ ಸಂದೇಶ ಕಳುಹಿಸುತ್ತೀರಿ ಎಂಬುದನ್ನು ನಂಬಲಾಗಲಿಲ್ಲ’ ಎಂದಿದ್ದಾರೆ.

ಅಷ್ಟೇ ಅಲ್ಲ, ‘ನಿಮ್ಮಂತಹ ಮೇರುನಟ ನನ್ನಂತಹ ಸಾಮಾನ್ಯ ನಟನೊಬ್ಬ ಚಿತ್ರರಂಗದಲ್ಲಿ ಇದ್ದಾನೆ ಎಂದು ಗುರುತಿಸುವುದೇ ನನಗೆ ಭಾರಿ ದೊಡ್ಡ ವಿಷಯ’ ಎಂದು ಮನತುಂಬಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)