ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರವೀಣೆ ವಿದ್ವಾನ್‌ ರವಿಕಿರಣ್‌ ‘ಸಂಗೀತ ಕಲಾನಿಧಿ’

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮದ್ರಾಸ್‌ನ ದ ಮ್ಯೂಸಿಕ್‌ ಅಕಾಡೆಮಿ ನೀಡುವ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಚಿತ್ರವೀಣೆ ವಿದ್ವಾನ್‌ ಎನ್‌. ರವಿಕಿರಣ್‌ ಪಾತ್ರರಾಗಿದ್ದಾರೆ.

2017ರ ಡಿಸೆಂಬರ್‌ 17ರಿಂದ 2018ರ ಜನವರಿ 1ರವರೆಗೆ ನಡೆಯಲಿರುವ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಯನ್ನೂ ಅವರು  ವಹಿಸಿಕೊಳ್ಳಲಿದ್ದಾರೆ.

2018ರ ಜನವರಿ 1ರಂದು ನಡೆಯುವ ಸಮಾರಂಭದಲ್ಲಿ ರವಿಕಿರಣ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ  ಎನ್‌. ಮುರಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತರ ಪ್ರಶಸ್ತಿಗಳು: ಮೃದಂಗ ವಿದ್ವಾನ್‌ ವಿ. ಕಮಲಾಕರ ರಾವ್‌ ಮತ್ತು ಗಾಯಕಿ ರಾಧಾ ನಂಬೂದಿರಿ ಅವರಿಗೆ ‘ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿ ನೀಡಲಾಗುವುದು. ಘಟಂ ವಾದಕರಾದ ಸುಕನ್ಯಾ ರಾಮಗೋಪಾಲ್‌ ಮತ್ತು ಓದುವರ್‌ ಪರಂಪರೆಯ ಪ್ರತಿನಿಧಿ ಮುತ್ತು ಕಂದಸ್ವಾಮಿ ದೇಸೀಕಾರ್‌ ಅವರು ‘ಟಿ.ಟಿ.ಕೆ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಸಂಗೀತ ಶಾಸ್ತ್ರಜ್ಞ ಪ್ರಶಸ್ತಿಗೆ ಡಾ. ಟಿ.ಎಸ್ ಸತ್ಯವತಿ ಆಯ್ಕೆಯಾಗಿದ್ದಾರೆ. ವಯಲಿನ್‌ ವಾದಕರಿಗೆ ನೀಡಲಾಗುವ ‘ಪಪ್ಪಾ ವೆಂಕಟರಾಮಯ್ಯ ಪ್ರಶಸ್ತಿ’ಗೆ ತಿರುವಳ್ಳೂರು ಶ್ರೀ ಪಾರ್ಥಸಾರಥಿ ಆಯ್ಕೆಯಾಗಿದ್ದಾರೆ. ಈ ಎಲ್ಲ ಪ್ರಶಸ್ತಿಗಳ ಪ್ರದಾನ 2018ರ ಜ.1ರಂದು ನಡೆಯಲಿದೆ.

ನಾಟ್ಯ ಪ್ರಶಸ್ತಿ: ನೃತ್ಯ ಕ್ಷೇತ್ರದಲ್ಲಿ ನೀಡಲಾಗುವ ‘ನೃತ್ಯ ಕಲಾನಿಧಿ ಪ್ರಶಸ್ತಿ’ಗೆ ಖ್ಯಾತ ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ ಮತ್ತು ಲೇಖಕಿ ಕುಮಾರಿ ಲಕ್ಷ್ಮಿ ವಿಶ್ವನಾಥನ್‌ ಆಯ್ಕೆಯಾಗಿದ್ದಾರೆ. 2018ರ ಜ.3ರಂದು ನಡೆಯಲಿರುವ ನೃತ್ಯ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎನ್‌. ಮುರಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT