ಶುಕ್ರವಾರ, ಡಿಸೆಂಬರ್ 6, 2019
21 °C

ಪರ್ಚಂಡಿ ಹಾಡುಗಳ ಬಿಡುಗಡೆ

Published:
Updated:
ಪರ್ಚಂಡಿ ಹಾಡುಗಳ ಬಿಡುಗಡೆ

ಅದು ಪರ್ಚಂಡಿ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಮಾತು ಆರಂಭಿಸಿದ ಸಿನಿಮಾ ನಿರ್ಮಾಪಕ ಕೆ.ಸಿ. ಶಿವಾನಂದ್, 'ನಲವತ್ತು ವರ್ಷಗಳ ಹಿಂದಿನ ಗ್ರಾಮೀಣ ಪ್ರದೇಶಗಳ ಜನರ ಜೀವನ, ಉಡುಗೆ, ಉದ್ಯೋಗ ಹಾಗೂ ಇತರ ಸಂಗತಿಗಳ ಬಗ್ಗೆ ವಿಸ್ತಾರವಾಗಿ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಆಗಿದೆ. ಇಂದಿನ ಜನರಿಗೆ ತಮ್ಮ ಹಿಂದಿನವರ ವೃತ್ತಿ ಬಗ್ಗೆ ಅರಿವು ಮೂಡಿಸುವ ಯತ್ನವನ್ನೂ ಮಾಡಲಾಗಿದೆ' ಎಂದು ಹೇಳಿದರು.

ಚಿಕ್ಕಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಿದ್ದ ಮಹೇಶ್ ದೇವ್ ಅವರು ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ತೀರ್ಥಹಳ್ಳಿಯ ಹುಡುಗಿ ಕಲ್ಪನಾ ನಾಯಕ ನಟಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕ ನಾಯಕಿ ಹಠಕ್ಕೆ ಬಿದ್ದು ಪ್ರೀತಿಸಿ, ಆ ನಂತರ ಮೂಡುವ ಭಾವನೆಗಳಿಂದಾಗಿ ಏನಾಗುತ್ತದೆ ಎಂಬುದನ್ನು ಸಿನಿಮಾ ನೋಡಿ ಅರಿಯಬೇಕು ಎಂದು ಹೇಳಿದರು ಮೊದಲಬಾರಿ ನಿರ್ದೇಶನ ಮಾಡಿರುವ ಜೂಮ್ ರವಿ.

ಪ್ರತಿಕ್ರಿಯಿಸಿ (+)