ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಭಾಷೆ ಸಂಸ್ಕೃತಿ– ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

Last Updated 27 ಜುಲೈ 2017, 19:53 IST
ಅಕ್ಷರ ಗಾತ್ರ

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನೀಡುವ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಮಂದಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಎ.ಕೇಪು ಅಜಿಲ (ಅರೆಭಾಷೆ ಜನಪದ ಮತ್ತು ಸಂಸ್ಕೃತಿ), ಮಡಿಕೇರಿ ತಾಲ್ಲೂಕು ಅವಂದೂರು ಗ್ರಾಮದ ಪಟ್ಟಡ ಪ್ರಭಾಕರ (ಸಾಹಿತ್ಯ, ಕಲೆ), ಬೆಂಗಳೂರಿನ ಅಮ್ಮಾಜೀರ ಪೊನ್ನಪ್ಪ (ಸಂಗೀತ ಕ್ಷೇತ್ರ) ಅವರು 2016ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸುಳ್ಯ ತಾಲ್ಲೂಕಿನ ಪಂಜದ ಡಾ.ಪುರುಷೋತ್ತಮ ಬಿಳಿಮಲೆ (ಸಂಶೋಧನಾ ಕ್ಷೇತ್ರ), ಮಡಿಕೇರಿ ತಾಲ್ಲೂಕು ಕುಂಬಳದಾಳು ಗ್ರಾಮದ ಕುಲ್ಲಚನ ಕಾರ್ಯಪ್ಪ (ಸಾಹಿತ್ಯ ಕ್ಷೇತ್ರ), ಸುಳ್ಯದ ಎಂ.ಜಿ.ಕಾವೇರಮ್ಮ (ಅರೆಭಾಷೆ ಸಾಹಿತ್ಯ) ಅವರು 2017ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್‌ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಗಸ್ಟ್‌ನಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ತಲಾ ₹ 50 ಸಾವಿರ ನಗದು, ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT