ಶುಕ್ರವಾರ, ಆಗಸ್ಟ್ 7, 2020
23 °C

ಅಕಾಡೆಮಿಗಳಿಗೆ ಕೊನೆಗೂ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕಾಡೆಮಿಗಳಿಗೆ ಕೊನೆಗೂ ನೇಮಕ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸಾಹಿತಿ ಅರವಿಂದ ಮಾಲಗತ್ತಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ವಿಮರ್ಶಕ  ಕೆ. ಮರುಳಸಿದ್ದಪ್ಪ ಸೇರಿದಂತೆ ಆರು ಅಕಾಡೆಮಿಗಳು ಮತ್ತು ಎರಡು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಪುಸ್ತಕ ಪ್ರಾಧಿಕಾರಕ್ಕೆ ವಸುಂಧರಾ ಭೂಪತಿ, ಸಂಗೀತ ಮತ್ತು ನೃತ್ಯ ಅಕಾಡೆಮಿಗೆ ಧಾರವಾಡದ ಪಂಡಿತ್‌ ಫಯಾಜ್‌ ಖಾನ್‌, ಕರ್ನಾಟಕ ನಾಟಕ ಅಕಾಡೆಮಿಗೆ ಬೆಂಗಳೂರಿನ ಜಿ. ಲೋಕೇಶ್‌,  ಜಾನಪದ ಅಕಾಡೆಮಿಗೆ ಶಿವಮೊಗ್ಗದ ಬಿ. ಟಾಕಪ್ಪ, ಶಿಲ್ಪಕಲಾ ಅಕಾಡೆಮಿಗೆ ಚಿತ್ರದುರ್ಗದ ಕಾಳಾಚಾರ್, ತುಳು ಸಾಹಿತ್ಯ ಅಕಾಡೆಮಿಗೆ  ದಕ್ಷಿಣ ಕನ್ನಡ ಜಿಲ್ಲೆಯ ಎ.ಸಿ.ಭಂಡಾರಿ ಅವರನ್ನು ನೇಮಿಸಲಾಗಿದೆ.

ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಜತೆಗೆ, ಸದಸ್ಯರನ್ನೂ ನೇಮಕ ಮಾಡಲಾಗಿದೆ.ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರ ಸಂಖ್ಯೆಯನ್ನು 10 ರಿಂದ 15ಕ್ಕೆ, ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರ ಸಂಖ್ಯೆಯನ್ನು 10 ರಿಂದ 12ಕ್ಕೆ ಹೆಚ್ಚಿಸಲಾಗಿದೆ.

ನೇಮಕವಾದ ದಿನದಿಂದ ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷ ಮತ್ತು ಸದಸ್ಯರ ಅವಧಿ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದಿನ ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಫೆಬ್ರುವರಿಯಲ್ಲಿ ಮುಕ್ತಾಯಗೊಂಡಿತ್ತು. ಆರು ತಿಂಗಳಿನಿಂದ ಈ ಹುದ್ದೆಗಳು ಖಾಲಿ ಇದ್ದವು.

ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೇಮಕವಾದ ಸದಸ್ಯರ ಪಟ್ಟಿ

ಕರ್ನಾಟಕ ಸಾಹಿತ್ಯ ಅಕಾಡೆಮಿ: ಶಿವಗಂಗಾ ರುಮ್ಮ(ಕಲಬುರ್ಗಿ), ಸಾವಿತ್ರಿ ಮುಜುಮದಾರ್(ಕೊಪ್ಪಳ), ಕವಿತಾ ಕುಸುಗಲ್(ಬೆಳಗಾವಿ), ಬಿ. ಎಂ. ಹರಪನಹಳ್ಳಿ(ಗದಗ), ಅಶೋಕ ಬ. ಹಳ್ಳಿಯವರ(ಹಾವೇರಿ), ಸಿದ್ಧಲಿಂಗಪ್ಪ ಬೀಳಗಿ (ಬಾಗಲಕೋಟೆ), ಸ. ರಘುನಾಥ್ (ಕೋಲಾರ), ರಂಗನಾಥ ಕಂಟನ

ಕುಂಟೆ (ಬೆಂಗಳೂರು ಗ್ರಾಮಾಂತರ), ಡಾ. ರಾಜಶೇಖರ ಮಠಪತಿ (ಬೆಂಗಳೂರು), ಸಂಗಮೇಶ ಬಾದವಾಡಗಿ (ಬೆಂಗಳೂರು), ಕೆ.ವಿ. ರಾಜೇಶ್ವರಿ (ಚಿಕ್ಕಬಳ್ಳಾಪುರ), ಬೈರಮಂಗಲ ರಾಮೇಗೌಡ (ರಾಮನಗರ), ಸಿ. ನಾಗಣ್ಣ (ಚಾಮರಾಜನಗರ), ಪ್ರಶಾಂತ ನಾಯಕ(ಶಿವಮೊಗ್ಗ), ಮುಮ್ತಾಜ್ ಬೇಗಂ (ಉಡುಪಿ)

ನಾಟಕ ಅಕಾಡೆಮಿ: ವೆಂಕಟ ರಾಜು(ಬೆಂಗಳೂರು), ಬಲವಂತರಾವ್ ವಿಠ್ಠಲ (ಬೆಂಗಳೂರು), ಬಿ.ಎಸ್. ವಿದ್ಯಾರಣ್ಯ (ಬೆಂಗಳೂರು),ರಾಮಕೃಷ್ಣ ಬೇಳ್ತೂರು (ಕೋಲಾರ), ಮೈಲಾರಪ್ಪ (ತುಮಕೂರು), ಹೊನ್ನ ನಾಯಕ (ಮಂಡ್ಯ), ಬೇಲೂರು ರಘುನಂದನ್ (ಹಾಸನ), ಬಾಸುಮಾ ಕೊಡಗು (ಉಡುಪಿ), ಬಿ.ಸಂದೀಪ್(ಕಲಬುರ್ಗಿ), ಶಿವಕುಮಾರಿ (ಬಳ್ಳಾರಿ), ಶಾಂತಾ ಕುಲಕರ್ಣಿ (ರಾಯಚೂರು), ಕೇದಾರಸ್ವಾಮಿ ಶೇಖರಯ್ಯ (ಗದಗ), ಗಣೇಶ್ ಅಮೀನಗಡ (ಬಾಗಲಕೋಟೆ), ಬಸವರಾಜಪ್ಪ ಶಿವಪ್ಪ ದೊಡ್ಡಮನಿ (ಧಾರವಾಡ), ಪ್ರೇಮಾ ತಾಳಿಕೋಟೆ ಉರ್ಫ್ ಫರ್ವಿನ್ (ವಿಜಯಪುರ).

ಸಂಗೀತ–ನೃತ್ಯ ಅಕಾಡೆಮಿ: ನಿರುಪಮಾ ರಾಜೇಂದ್ರ (ಬೆಂಗಳೂರು), ರತ್ನಮಾಲಾ ಪ್ರಕಾಶ್ (ಬೆಂಗಳೂರು), ವಿ. ರಮೇಶ್ (ಕೋಲಾರ), ರೂಪಾ ರಾಜೇಶ್ (ಚಿಕ್ಕಬಳ್ಳಾಪುರ) ಆರ್.ಎನ್. ಶ್ರೀಲತಾ (ಮೈಸೂರು), ಎಂ. ವಿ. ಗೋಪಾಲ (ಶಿವಮೊಗ್ಗ), ಆನಂದ ಮಾದಲಗೆರೆ (ಹಾಸನ), ಅರವಿಂದ ಹೆಬ್ಬಾರ (ಉಡುಪಿ), ಶಿವಣ್ಣ ಹೂಗಾರ ದೇಸಾಯಿ ಕಲ್ಲೂರ (ಕಲಬುರ್ಗಿ), ನಾಗರಾಜ ಶ್ಯಾವಿ (ಕೊಪ್ಪಳ), ಎಸ್. ವಿ. ಕಲ್ಮಠ (ಬೀದರ), ಅಶೋಕ ಹುಗ್ಗಣ್ಣನವರ (ಉತ್ತರ ಕನ್ನಡ), ಸಿದ್ಧೇಶ್ವರ ಶಾಸ್ತ್ರಿ ತೆಲ್ಲೂರ (ಗದಗ), ಎಸ್. ಬಾಳೇಶ್ (ಬೆಳಗಾವಿ) ಮತ್ತು ಹನುಮಂತಪ್ಪ ಮೇತ್ರಿ (ಬಾಗಲಕೋಟೆ).

ಕರ್ನಾಟಕ ಜಾನಪದ ಅಕಾಡೆಮಿ: ಬಿ.ಎಸ್. ತಳವಾಡಿ (ಬೆಂಗಳೂರು), ನಿರ್ಮಲಾ (ಬೆಂಗಳೂರುಗ್ರಾಮಾಂತರ), ಡಿ. ರಾಜಪ್ಪ (ಕೋಲಾರ), ಚಂದ್ರಪ್ಪ ಕಾಲ್ಕೆರೆ (ಚಿತ್ರದುರ್ಗ), ಕಾಳಯ್ಯ (ರಾಮನಗರ), ಮಹದೇವು(ಮೈಸೂರು), ವೆಂಕಟೇಶ ಹಿಂದವಾಡಿ (ಚಾಮರಾಜನಗರ), ಸವಿತಾ ಚಿರಕುನ್ನಯ್ಯ (ಮಂಡ್ಯ), ಸಿ. ರಂಗಸ್ವಾಮಿ (ಚಿಕ್ಕಮಗಳೂರು), ಹನುಮಂತ ಬರಗಾಲ (ಬಾಗಲಕೋಟೆ), ಕೆ.ಸಿ. ನಾಗರಜ್ಜಿ (ಹಾವೇರಿ), ಪುರುಶೋತ್ತಮ ಪಿ. ಗೌಡ (ಉತ್ತರ ಕನ್ನಡ), ವಿಜಯಕುಮಾರ ಸೋನಾರೆ (ಬೀದರ್), ಮಂಜಮ್ಮ ಜೋಗತಿ (ಬಳ್ಳಾರಿ), ಪ್ರಕಾಶ್ ಎಸ್. ಅಂಗಡಿ (ಯಾದಗಿರಿ).

ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ಕೃಷ್ಣಾ ನಾಯಕ (ಬೆಂಗಳೂರು), ಎಂ. ರಘು ಶಿಲ್ಪಿ (ಬೆಂಗಳೂರು), ಜಿ. ಲಕ್ಷ್ಮೀಪತಿ(ಬೆಂಗಳೂರು), ಎಸ್.ಜಿ. ಅರುಣಕುಮಾರ (ಕೋಲಾರ), ಸಿ.ಪಿ. ವಿಶ್ವನಾಥ್ (ತುಮಕೂರು), ಎಚ್.ಎಚ್‌. ಭರತರಾಜ್(ದಾವಣಗೆರೆ), ಪಿ. ಬಾಬು (ಉಡುಪಿ), ಬಿ.ಸಿ. ಸುಖೇಶ್(ಚಿಕ್ಕಮಗಳೂರು), ಬಸವರಾಜ ಪಾಂಡುರಂಗ ಕಂಬಾರ (ಬಾಗಲಕೋಟೆ), ಅಲ್ಲಿಬಾಬ ಸೈ ನಧಾಫ (ಬಾಗಲಕೋಟೆ), ವಿಠ್ಠಲ ಮನೋಹರ ಬಡಿಗೇರ (ವಿಜಯಪುರ), ಸುಮಲತಾ ಕವಲೂರು (ಗದಗ), ವಿರುಪಾಕ್ಷಪ್ಪ ಶಿಲ್ಪಿ (ಬಳ್ಳಾರಿ), ನಿಂಗಪ್ಪ ದೇವೀಂದ್ರಪ್ಪ ಕೇರಿ (ಕಲಬುರ್ಗಿ), ಗಾಯಿತ್ರಿ ಎ. ಶಿಲ್ಪಿ (ಕಲಬುರ್ಗಿ).

ಕೊಂಕಣಿ ಸಾಹಿತ್ಯ ಅಕಾಡೆಮಿ: ಮೋಹನ ವರ್ಣೇಕರ್ (ಬೆಂಗಳೂರು), ಜೋಕಿಂ ಸ್ಟ್ಯಾನ್ಲಿ (ದಕ್ಷಿಣ ಕನ್ನಡ), ಪಾವ್ಲು ಮೋರಾಸ್(ದಕ್ಷಿಣ ಕನ್ನಡ), ದಾಮೋದರ್‍ ಬಂಡಾರಕರ್ (ದಕ್ಷಿಣ ಕನ್ನಡ), ಲಿಂಗಪ್ಪ ಗೌಡ (ದಕ್ಷಿಣ ಕನ್ನಡ), ಉಲ್ಲಾಸ್ ಲಕ್ಷ್ಮೀ ನಾರಾಯಣ (ಉತ್ತರ ಕನ್ನಡ), ಸುಮಂಗಲಾ ಸದಾನಂದ ನಾಯಕ (ಉತ್ತರ ಕನ್ನಡ), ನಾಗೇಶ ಅಣ್ವೇಕರ್ (ಉತ್ತರ ಕನ್ನಡ), ರಾಮ ಎ. ಮೇಸ್ತ್ರ (ಉಡುಪಿ), ಪೂರ್ಣಿಮಾ ಸುರೇಶ್ (ಉಡುಪಿ), ಓಂ ಗಣೇಶ ಉಪ್ಪುಂದ (ಉಡುಪಿ), ಸಂತೊಷ ಮಹಾಲೆ (ಧಾರವಾಡ).

ತುಳು ಸಾಹಿತ್ಯ ಅಕಾಡೆಮಿ: ಸುಧಾ ನಾಗೇಶ್, ವಿಜಯಾ ಶೆಟ್ಟಿ, ತಾರಾನಾಥ ಗಟ್ಟಿ ಕಾಪಿಕಾಡು, ಗೋಪಾಲ್ ಅಂಚನ್, ಎಸ್‌.ವಿದ್ಯಾಶ್ರೀ, ದುರ್ಗಾ ಮೆನನ್, ಶಿವಾನಂದ ಕರ್ಕೆರಾ, ಬೆನೆಟ್ ಅಮ್ಮಣ್ಣ, ಚಂದ್ರಶೇಖರ ಗಟ್ಟಿ ಬೋಳೂರು, ವಾಸುದೇವ ಬೆಳ್ಳೆ, ನಿರಂಜನ ರೈ ಮಠಂತಬೆಟ್ಟು (ದಕ್ಷಿಣ ಕನ್ನಡ), ವೈ. ಎನ್. ಶೆಟ್ಟಿ (ಉಡುಪಿ).

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಎಂ. ಜಿ. ಹೆಗಡೆ (ಉತ್ತರ ಕನ್ನಡ), ಟಿ. ಎಸ್. ವಿವೇಕಾನಂದ (ಬೆಂಗಳೂರು), ದೇವರಾಜ ಕುರುಬ (ಬೆಂಗಳೂರು), ಎಂ. ಎಸ್. ಶಶಿಕಲಾಗೌಡ (ಮೈಸೂರು), ತಾರಿಣಿ ಶುಭದಾಯಿನಿ (ಚಿತ್ರದುರ್ಗ), ಮೋಹನ ಕುಂಠಾರ (ಬಳ್ಳಾರಿ), ಕೃಷ್ಣ ಕೊಲ್ಹಾರ ಕುಲಕರ್ಣಿ (ವಿಜಯಪುರ), ಆರೀಫ್ ರಾಜಾ (ರಾಯಚೂರು).

ಕರ್ನಾಟಕ ಪುಸ್ತಕ ಪ್ರಾಧಿಕಾರ

ಸಿದ್ದಣ್ಣ ಉಕ್ಕನಾಳ (ವಿಜಯಪುರ), ಜಯದೇವಿ ಗಾಯಕವಾಡ (ಬೀದರ), ಪ್ರಕಾಶ ಕಂಬತ್ತಹಳ್ಳಿ (ಬೆಂಗಳೂರು), ದ್ವಾರನಕುಂಟೆ ಪಾತಣ್ಣ (ತುಮಕೂರು) ಮತ್ತು ಕವಿತಾ ರೈ (ಕೊಡಗು).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.